Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
  • *ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*
  • *ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*
  • *ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*
  • *’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*
  • *ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*
  • *ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ *
  • *ಹಾಡಿಗೆ ಪೊಲೀಸ್ ಅಧಿಕಾರಿಗಳ ಭೇಟಿ*
  • *ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಚಿಂತನಾಗೋಷ್ಠಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಭಾರತದ ಗಣರಾಜ್ಯ ದಿನ, ಅತಿದೊಡ್ಡ ಸಂವಿಧಾನ ಮತ್ತು ರಾಷ್ಟ್ರಗೀತೆ
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಭಾರತ

ಭಾರತದ ಗಣರಾಜ್ಯ ದಿನ, ಅತಿದೊಡ್ಡ ಸಂವಿಧಾನ ಮತ್ತು ರಾಷ್ಟ್ರಗೀತೆ

ಜನವರಿ 25, 20235 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಭಾರತ ದೇಶದಲ್ಲಿ ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 26 ಜನವರಿ 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಾಗಿನಿಂದ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಾಮುಖ್ಯತೆಯನ್ನು ಗೌರವಿಸಲು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಭಾರತ ಸ್ವತಂತ್ರವಾದ ನಂತರ ಸಂವಿಧಾನ ಸಭೆಯನ್ನು ಘೋಷಿಸಲಾಯಿತು ಸಂವಿಧಾನ ಸಭೆಯ ಸದಸ್ಯರನ್ನು ಭಾರತದ ರಾಜ್ಯ ಅಸೆಂಬ್ಲಿಗಳ ಚುನಾಯಿತ ಸದಸ್ಯರು ಆಯ್ಕೆ ಮಾಡಿದರು. ಡಾ.ಭೀಮರಾವ್ ಅಂಬೇಡ್ಕರ್, ಜವಾಹರಲಾಲ್ ನೆಹರು, ಡಾ.ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದವರು ಈ ಸಭೆಯ ಪ್ರಮುಖ ಸದಸ್ಯರಾಗಿದ್ದರು.
ಜನವರಿ 26 ರಂದು ದೇಶದಾದ್ಯಂತ ಸಂವಿಧಾನವು ಜಾರಿಗೆ ಬಂದಿತು. ಇದರ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು, ಸಂವಿಧಾನದಲ್ಲಿ ಭಾರತದ ಗಣರಾಜ್ಯ ಸ್ವರೂಪವನ್ನು ಗುರುತಿಸಿದೆ. ಈ ದಿನವನ್ನು ಭಾರತ ಸರ್ಕಾರವು ದೇಶಾದ್ಯಂತ ರಜೆ ಎಂದು ಘೋಷಿಸಿದೆ. ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತದೆ. ಪ್ರತಿ ವರ್ಷ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾರ್ಯಕ್ರಮ ಮತ್ತು ಇಂಡಿಯಾ ಗೇಟ್‍ನಲ್ಲಿ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಮೂರು ಸೇನೆಗಳು ವಿಜಯ್ ಚೌಕ್‍ನಿಂದ ತಮ್ಮ ಪರೇಡ್ ಅನ್ನು ಪ್ರಾರಂಭಿಸುತ್ತವೆ.
ಇದರಲ್ಲಿ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆರ್ಮಿ ಬ್ಯಾಂಡ್‍ಗಳು, ಎನ್‍ಸಿಸಿ ಕೆಡೆಟ್‍ಗಳು ಮತ್ತು ಪೆÇಲೀಸ್ ಪಡೆಗಳು ವಿವಿಧ ಮಧುರ ಗೀತೆಗಳ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುತ್ತವೆ. ರಾಜ್ಯಗಳಲ್ಲೂ ರಾಜ್ಯಪಾಲರ ಸಮ್ಮುಖದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ನಮ್ಮ ಭಾರತ ದೇಶವು ಗಣರಾಜ್ಯ ರಾಷ್ಟ್ರವಾಗಿ ವಿಶ್ವ ವೇದಿಕೆಯಲ್ಲಿ ಸ್ಥಾಪನೆಯಾದಾಗ ನಾವು ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದಾದರೆ ಅಥವಾ ಯಾವುದೇ ರೀತಿಯ ದಬ್ಬಾಳಿಕೆ ಮತ್ತು ದುರಾಡಳಿತದ ವಿರುದ್ಧ ಧ್ವನಿ ಎತ್ತಬಹುದಾದರೆ, ಅದು ನಮ್ಮ ದೇಶದ ಸಂವಿಧಾನ ಮತ್ತು ಗಣರಾಜ್ಯ ಸ್ವರೂಪದಿಂದ ಮಾತ್ರ ಸಾಧ್ಯವಾಗಿದೆ. ಇದೇ ಕಾರಣಕ್ಕೆ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಕರಡು ಸಮಿತಿ ರಚನೆ ಮಾಡಲಾಯಿತು. ಸಮಿತಿಯು ಅದೇ ವರ್ಷ ನ.4 ರಂದು ಶಾಸನ ಸಭೆಯಲ್ಲಿ ಸಂವಿಧಾನದ ಕರಡು ಪ್ರತಿಯನ್ನು ಮಂಡಿಸಿತು. 1949, ನ.26ರಂದು ಶಾಸನ ಸಭೆ ಕರಡು ಪ್ರತಿಯಲ್ಲಿ ಅನೇಕ ತಿದ್ದುಪಡಿಗಳ ಬಳಿಕ ಅಂಗೀಕಾರ ಮಾಡಿತು. ಇದಕ್ಕೂ ಮುನ್ನ ಅಂದರೆ, 1929ರ ಜ.26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಘೋಷಣೆ ಮಾಡಿತ್ತು. ಲಾಹೋರ್‍ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಈ ದಿನವನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ 1950ರ ಜ.26 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು.
::: ಅತಿ ದೊಡ್ಡ ಲಿಖಿತ ಸಂವಿಧಾನ :::
ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ. ಇದರಲ್ಲಿ ಒಂದು ಮುನ್ನುಡಿ, 22 ಭಾಗಗಳು, 12 ಪರಿಚ್ಛೇದಗಳು, 448 ವಿಧಿಗಳು, 5 ಅನುಬಂಧಗಳು ಹಾಗೂ 113 ತಿದ್ದುಪಡಿಗಳು ಇವೆ. ಇಂಗ್ಲಿμïನ ಸಂವಿಧಾನ ಪ್ರತಿಯಲ್ಲಿ 1,17,369 ಪದಗಳಿವೆ. ಸಂವಿಧಾನ ರಚನೆಯಾಗುವ ಮುನ್ನ ಅದರ ಕರಡು ಸುಮಾರು 2000 ಬಾರಿ ತಿದ್ದುಪಡಿಗೆ ಒಳಗಾಗಿದೆ. ಇದು ಕೈಬರಹದಲ್ಲಿರುವ ಅತಿ ದೊಡ್ಡ ಸಂವಿಧಾನವೂ ಹೌದು.
ಮೂಲದಲ್ಲಿ ಇದನ್ನು ಟೈಪ್ ಮಾಡಿರಲಿಲ್ಲ ಅಥವಾ ಪ್ರಿಂಟ್ ಕೂಡ ಮಾಡಿರಲಿಲ್ಲ. ಇದನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು, ಕ್ಯಾಲಿಗ್ರಾಫ್ ಮಾಡಲಾಗಿದೆ. ಇದನ್ನು ಕೈಬರಹದಲ್ಲಿ ಪೂರ್ತಿಯಾಗಿ ಬರೆದವರು ಪ್ರೇಮ್ ಬಿಹಾರಿ ನಾರಾಯಣ್ ರೈಜದಾ. ನಂತರ ಇದನ್ನು ಡೆಹ್ರಾಡೂನ್‍ನಲ್ಲಿ ಮುದ್ರಿಸಿ ಫೋಟೋಲಿಥೋಗ್ರಾಫ್ ಮಾಡಲಾಯಿತು. ಮೂಲ ಸಂವಿಧಾನದ ಪ್ರತಿ ಪುಟವನ್ನೂ ಕಲಾತ್ಮಕವಾಗಿ ಸಿಂಗರಿಸಲಾಗಿದೆ. ಪ್ರತಿ ಪುಟದಲ್ಲೂ ಕೋಲ್ಕೊತ್ತಾದ ಶಾಂತಿನಿಕೇತನದ ಕಲಾವಿದರು ಭಾರತೀಯ ಪುರಾಣ ಹಾಗೂ ಇತಿಹಾಸದ ಚಿತ್ರಗಳನ್ನು ಬರೆದು ಕಳೆಗಟ್ಟಿಸಿದ್ದಾರೆ. ಬೇವಹರ್ ರಾಮಮನೋಹರ ಸಿನ್ಹಾ ಹಾಗೂ ನಂದಲಾಲ್ ಬೋಸ್ ಅವರಲ್ಲಿ ಪ್ರಮುಖರು.
ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿ, ಸ್ವತಂತ್ರ ಗಣರಾಜ್ಯವಾದ ದಿನವನ್ನು ಗಣರಾಜ್ಯೋತ್ಸವ ದಿನ ಎನ್ನಲಾಗುತ್ತದೆ. ಈ ಪ್ರಯುಕ್ತ ಹೊಸದಿಲ್ಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಆಕರ್ಷಕ ಪರೇಡ್ ನಡೆಯುತ್ತದೆ. ದೇಶಾದ್ಯಂತ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ಮೂಲಕ ಆಚರಿಸಲಾಗುತ್ತದೆ. ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳು ಧ್ವಜಾರೋಹಣ ಮಾಡಿದರೆ ರಾಜ್ಯಗಳಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಧ್ವಜಾರೋಹಣ ಮಾಡುತ್ತಾರೆ.
ಗಣರಾಜ್ಯ ದಿನ ರಾಷ್ಟ್ರಪತಿಗಳು ಹೊಸದಿಲ್ಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಸ್ಮಾರಕಕ್ಕೆ ಗೌರವ ಸಲ್ಲಿಸಿ, ಜನ್‍ಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಆ ಬಳಿಕ ಭಾರತೀಯ ಸೇನಾಪಡೆಗಳಿಂದ ಆಕರ್ಷಕ ಪಥ ಸಂಚಲನ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ
ಭಾರತ ತನ್ನ ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸುವುದಲ್ಲದೆ, ಇಲ್ಲಿನ ವೈವಿಧ್ಯಮಯ ಸಂಸ್ಕøತಿಯ ಅನಾವರಣವೂ ಆಗುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ರಿಂಗ್ಲೆಟ್ ಹಾಕುವ ಮೂಲಕ ಭಾರತದ ಪ್ರಧಾನಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಬಳಿಕ 21-ಗನ್ ಸೆಲ್ಯೂಟ್, ರಾಷ್ಟ್ರಧ್ವಜಾರೋಹಣ ಮತ್ತು ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡಲಾಗುತ್ತದೆ. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕಚಕ್ರ ಮತ್ತು ವೀರಚಕ್ರದ ರೂಪದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆಪತ್ಕಾಲದಲ್ಲಿ ಧೈರ್ಯ ತೋರಿದ ಮಕ್ಕಳು ಮತ್ತು ಸಾಮಾನ್ಯ ನಾಗರಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಶೌರ್ಯ ಪ್ರಶಸ್ತಿಗಳ ವಿಜೇತರು ಮಿಲಿಟರಿ ಜೀಪ್‍ಗಳಲ್ಲಿ ರಾಷ್ಟ್ರಪತಿಗೆ ಸೆಲ್ಯೂಟ್ ಮಾಡುತ್ತಾರೆ. ಇದರ ನಂತರ ಭಾರತವು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್‍ನಿಂದ ಪಥಸಂಚಲನ ಸೇರಿದಂತೆ ವಿವಿಧ ರೆಜಿಮೆಂಟ್‍ಗಳಿಂದ ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುತ್ತಾರೆ. ಭಾರತೀಯ ವಾಯುಪಡೆಯ ಫೈಟರ್ ಜೆಟ್‍ಗಳು ಜನಪಥ್‍ನಲ್ಲಿ ಹಾರಾಟ ನಡೆಸಿ ಪರಾಕ್ರಮ ಪ್ರದರ್ಶಿಸುವ ಮೂಲಕ ಮೆರವಣಿಗೆ ಕೊನೆಗೊಳ್ಳುತ್ತದೆ.
ದೆಹಲಿಯು ಭಾರತದ ರಾಜಧಾನಿಯಾಗಿದ್ದು, ಗಣರಾಜ್ಯೋತ್ಸವದ ಅತಿದೊಡ್ಡ ಆಚರಣೆಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಪರೇಡ್‍ನ ಲೈವ್ ವೆಬ್‍ಕಾಸ್ಟ್ ಕೂಡಾ ಮಾಡಲಾಗುತ್ತದೆ. ಈ ಮೂಲಕ ಪ್ರತಿ ವರ್ಷ ಆಕರ್ಷಕ ಪರೇಡ್ ವೀಕ್ಷಿಸಲು ಬಯಸುವ ಲಕ್ಷಾಂತರ ಜನರು ಇಂಟರ್ನೆಟ್ ಮೂಲಕ ನೋಡಬಹುದಾಗಿದೆ.
::: ಜನಗಣಮನ ರಾಷ್ಟ್ರಗೀತೆಯಾಯಿತು :::
ಸಂವಿಧಾನ ಸಭೆಯು 1950ರ ಜ.24ರಂದು ರವೀಂದ್ರನಾಥ ಟಾಗೋರ್ ವಿರಚಿತ ‘ಜನಗಣಮನ ಅಧಿನಾಯಕ ಜಯ ಹೇ’ ಪದ್ಯವನ್ನು ಭಾರತದ ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರು ಇದನ್ನು ಘೋಷಿಸಿದರು. ಇದರ ಜೊತೆಗೇ, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ “ವಂದೇ ಮಾತರಂ” ಗೀತೆಯನ್ನು “ರಾಷ್ಟ್ರೀಯ ಹಾಡು” ಎಂದು ಕರೆದು ಅದಕ್ಕೂ “ಜನಗಣಮನ”ದ ಸಮಾನ ಸ್ಥಾನಮಾನ ನೀಡಲಾಯಿತು.
“ಜನಗಣಮನ”ವನ್ನು ಟಾಗೋರ್ ಐದು ಚರಣಗಳಲ್ಲಿ ಬರೆದಿದ್ದರು. ‘ಭಾರತ ಭಾಗ್ಯ ವಿಧಾತ’ನನ್ನು ಸ್ತುತಿಸುವ ಗೀತೆಯಿದು. ದೇಶದ ಎಲ್ಲಾ ವೈವಿಧ್ಯಗಳನ್ನು, ಹಿರಿಮೆಗಳನ್ನು ಇದು ಸಾಕ್ಷೀಕರಿಸುತ್ತದೆ. ಇದನ್ನು ಸಾರ್ವಜನಿಕವಾಗಿ ಮೊದಲು ಹಾಡಿದ್ದು ಕಲ್ಕತ್ತಾದಲ್ಲಿ 1911ರ ಡಿಸೆಂಬರ್ 27ರಂದು ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ. ಆಗ ಅದು ಒಂದು ದೇಶಭಕ್ತಿ ಗೀತೆಯಾಗಿತ್ತು. ಕೆಲವೇ ತಿಂಗಳಲ್ಲಿ, ಟಾಗೋರ್ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ತತ್ವಬೋಧಿನಿ ಪತ್ರಿಕೆಯಲ್ಲಿ ಅದು ಪ್ರಕಟವಾಯಿತು.
::: ಮೊದಲ ಗಣತಂತ್ರ ಪರೇಡ್ ಹೀಗಿತ್ತು :::
1950ರ ಜನವರಿ 26 ರಂದು ದೇಶದ ಎಲ್ಲಾ ಕಡೆಗಳಲ್ಲಿ ಮುಂಜಾನೆ “ಪ್ರಭಾತ್ ಫೇರಿ”ಗಳು ನಡೆದವು. ದಿಲ್ಲಿಯಲ್ಲಿ ಪ್ರಥಮ ನಿಯೋಜಿತ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್ ಅವರು ರಾಜಘಾಟ್‍ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದರು. ನಂತರ “ಗವರ್ನ್‍ಮೆಂಟ್ ಹೌಸ್”ಗೆ (ಈಗಿನ ರಾಷ್ಟ್ರತಿ ಭವನ) ತೆರಳಿ ದೇಶದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಭೇಟಿಯಾದರು. ನಂತರ ಇಬ್ಬರೂ ದರ್ಬಾರ್ ಹಾಲ್‍ಗೆ ಆಗಮಿಸಿದರು.
ಅಲ್ಲಿ ರಾಜಗೋಪಾಲಾಚಾರಿಯವರು ಭಾರತವನ್ನು ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಿದರು. ನಂತರ ರಾಜೇಂದ್ರಪ್ರಸಾದ್‍ರಿಗೆ ಆಗಿನ ಮುಖ್ಯ ನ್ಯಾಯಮೂರ್ತಿ ಹರಿಲಾಲ್ ಕಾನಿಯಾ ಅವರು ಪ್ರಮಾಣವಚನ ಬೋಧಿಸಿದರು. 10.30ರ ಹೊತ್ತಿಗೆ ಗವರ್ನರ್ ಜನರಲ್ ಅವರ ಧ್ವಜವನ್ನು ಕೆಳಗಿಳಿಸಿ, ತ್ರಿವರ್ಣ ಧ್ವಜವನ್ನು ಏರಿಸಲಾಯಿತು.
ಈ ಧ್ವಜ ಈಗಿನ ಧ್ವಜದಂತಿರಲಿಲ್ಲ, ಅದರಲ್ಲಿ ನಾಲ್ಕು ವಿಭಾಗಗಳಿದ್ದವು. ಮೊದಲ ಭಾಗದಲ್ಲಿ ಅಶೋಕನ ಸಿಂಹಗಳು, ಎರಡನೇ ಭಾಗದಲ್ಲಿ ಅಜಂತಾ ಗುಹೆಯ 5ನೇ ಶತಮಾನದ ಚಿತ್ರ, ಮೂರನೇ ಭಾಗದಲ್ಲಿ ದಿಲ್ಲಿಯ ಕೆಂಪು ಕೋಟೆಯ ತೂಕಯಂತ್ರ, ನಾಲ್ಕನೇ ಭಾಗದಲ್ಲಿ ಸಾರಾನಾಥ ಸ್ತೂಪದ ಪದ್ಮದಳ ಇದ್ದವು. 1971ರಲ್ಲಿ ಈ ಧ್ವಜದ ಬದಲು ತಿರಂಗಾ ಬಂತು.
::: ಬುಲೆಟ್ ಇರಲ್ಲ :::
ಭವ್ಯ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಹೆಜ್ಜೆ ಹಾಕುವ ನೂರಾರು ಯೋಧರ ಕೈಗಳಲ್ಲಿರುವ ಅತ್ಯಾಧುನಿಕ ರೈಫಲ್ ಹಾಗೂ ಬಂದೂಕುಗಳಲ್ಲಿ ಯಾವುದರಲ್ಲೂ ಒಂದೇ ಒಂದು ಗುಂಡು ಇಲ್ಲದಂತೆ (ಗನ್ ಸೆಲ್ಯೂಟ್ ನೀಡುವ ದಳ ಹೊರತುಪಡಿಸಿ) ನೋಡಿಕೊಳ್ಳಲಾಗುತ್ತದೆ. ಪಥಸಂಚಲನದಲ್ಲಿ ಭಾಗವಹಿಸುವ ಪ್ರತಿಯೊಬ್ಬನನ್ನೂ ನಾಲ್ಕು ಬಾರಿ ಭದ್ರತಾ ಪರಿಶೀಲನೆಯ ಬಳಿಕವೇ ಒಳಬಿಡಲಾಗುತ್ತದೆ.
ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅತಿ ಗಣ್ಯರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದರಿಂದಾಗಿ ಈ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಭೂಸೈನ್ಯ ತುಕಡಿ ಯೋಧರು ದೇಶೀ ತಯಾರಿಯ “ಇನ್ಸಾಸ್” ರೈಫಲ್ಲನ್ನು ಹೊಂದಿರುತ್ತಾರೆ.
ರಾಜಪಥದಲ್ಲಿ ಗಣತಂತ್ರ ಪರೇಡ್ ನಡೆಯುವ ಪದ್ಧತಿ ರೂಢಿಗೆ ಬಂದುದು 1955ರಿಂದ. ಅಲ್ಲಿಯವರೆಗೆ, ಅಂದರೆ 1950ರಿಂದ 1955ರವರೆಗೆ ಇದನ್ನು ದಿಲ್ಲಿಯ ಕೆಂಪು ಕೋಟೆ, ನ್ಯಾಷನಲ್ ಸ್ಟೇಡಿಯಂ, ಕಿಂಗ್ಸ್‍ವೇ ಕ್ಯಾಂಪ್ ಹಾಗೂ ರಾಮಲೀಲಾ ಮೈದಾನದಲ್ಲಿ ನಡೆಸಲಾಗುತ್ತಿತ್ತು. ರಾಜಪಥವನ್ನು ಮೊದಲು ಕಿಂಗ್ಸ್‍ವೇ ಎಂದು ಕರೆಯಲಾಗುತ್ತಿತ್ತು.
ರಾಷ್ಟ್ರಪತಿಗಳು ರಾಷ್ಟ್ರಧ್ವಜ ಆರೋಹಣ ಮಾಡುವ ಸಂದರ್ಭದಲ್ಲಿ ನಡೆಸುವ 21 ಗನ್ ಸೆಲ್ಯೂಟ್‍ಗಳನ್ನು 7 ಫಿರಂಗಿಗಳ ಮೂಲಕ 3 ಸುತ್ತುಗಳಲ್ಲಿ ಮಾಡಲಾಗುತ್ತದೆ. ಬ್ಯಾಂಡ್‍ನಲ್ಲಿ ರಾಷ್ಟ್ರಗೀತೆ ಮೊಳಗುವ ಮುನ್ನ ಒಮ್ಮೆ, ರಾಷ್ಟ್ರಗೀತೆಯ ಬಳಿಕ ಎರಡು ಬಾರಿ ವಂದನೆ ನಡೆಯುತ್ತದೆ.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಮಾ:೦೪: ವಿದ್ಯಾರ್ಥಿ ಜೀವನವು ಹಲವು ಒತ್ತಡಗಳಿಂದ ನಿರ್ಮಾಣವಾಗುತ್ತಿದೆ ಎನ್ನುವುದು ಸುಳ್ಳು.ಕಲಿಕೆ ಮತ್ತು ಸಾಮಾಜಿಕ ಚಿಂತನೆಯನ್ನು ಸಮಾನವಾಗಿ…

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026

*ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*

ಮಾರ್ಚ್ 4, 2026

*ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*

ಮಾರ್ಚ್ 4, 2026

*’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*

ಮಾರ್ಚ್ 4, 2026

*ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*

ಮಾರ್ಚ್ 4, 2026

*ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ *

ಮಾರ್ಚ್ 4, 2026

*ಹಾಡಿಗೆ ಪೊಲೀಸ್ ಅಧಿಕಾರಿಗಳ ಭೇಟಿ*

ಮಾರ್ಚ್ 4, 2026

*ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಚಿಂತನಾಗೋಷ್ಠಿ*

ಮಾರ್ಚ್ 4, 2026

*ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ*

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.