ಮಾಲಂಬಿ ಸರಕಾರಿ ಶಾಲೆಯ ವಾರ್ಷಿಕೋತ್ಸವ

28/01/2023

ಶನಿವಾರಸಂತೆ ಜ.28 : ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ ಕಲರವ ನಡೆಯಿತು.

ಶಾಲೆಯ ಎಸ್‌ಡಿಎಂಸಿ ಸಮಿತಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ, ಶಾಲೆಯ ಹಳೆ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಕ್ರೀಡಾಕೂಟ ನಡೆಯಿತು.
ವಾರ್ಷಿಕೋತ್ಸವ ಸಮಾರೋಪ ಸಮಾರಂಭವನ್ನು ಗ್ರಾಮದ ಹಿರಿಯ ಬಿ.ಎಂ.ಮಾದಪ್ಪ ಉದ್ಘಾಟಿಸಿ ಮಾತನಾಡಿ-ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ಪ್ರತಿಭೆಗಳು ಅಡಗಿದ್ದು ಇವುಗಳನ್ನು ಅನಾವಣಗೊಳಿಸಲು ವಾರ್ಷಿಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗುತ್ತದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಉಪನ್ಯಾಸಕ ಎಂ.ಎಸ್.ಪ್ರಸನ್ನ-ಶಾಲೆ ಶಿಕ್ಷಣದ ದೇಗುಲವಾಗಿದ್ದು ಇಲ್ಲಿ ಜಾತಿ, ಧರ್ಮ, ಮೇಲು ಕೀಳುಗಳೆಂಬ ತಾರತಮ್ಯ ಇರುವುದಿಲ್ಲ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ದೇಗುಲವಾಗಿದೆ ಎಂದರು. ಇಂದು ಪ್ರತಿಷ್ಠೆಯ ಹೆಸರಿನಲ್ಲಿ ಪೋಷಕರು ಸರಕಾರಿ ಶಾಲೆಯ ಬಗ್ಗೆ ತಾತ್ಸಾರ ಮನೋಭಾವನೆ ಬೆಳೆಸಿಕೊಂಡಿದ್ದಾರೆ ಈ ಕಾರಣದಿಂದ ಸರಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ ಈ ನಿಟ್ಟಿನಲ್ಲಿ ಪೋಷಕರು, ಸಾರ್ವಜನಿಕರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಲು ಚಿಂತನೆ ಹರಿಸುವಂತೆ ಮನವಿ ಮಾಡಿದರು.

ಹಿರಿಯ ವಿದ್ಯಾರ್ಥಿ ಎಚ್.ಎಸ್.ಪ್ರೇಮ್‌ನಾಥ್ ಮಾತನಾಡಿ-ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಕ್ಷೀಣಿಸುತ್ತಿದ್ದು ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಸಲಹೆ ನೀಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಆರ್.ಸುಂದರ್ ಅಧ್ಯಕ್ಷತೆವಹಿಸಿದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡ ಮಾಚಯ್ಯ, ಗ್ರಾ.ಪಂ.ಸದಸ್ಯ ಪಿ.ಎನ್.ಗಂಗಾಧರ್, ಸದಸ್ಯೆ ಯಮುನಾ ಸುರೇಶ್, ಸದಸ್ಯೆ ಮುತ್ತಮ್ಮ, ಪ್ರಾಥಮಿಕ ಸಹಕಾರರ ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್, ಶಾಲಾ ಮುಖ್ಯ ಶಿಕ್ಷಕ ಗಿರೀಶ್, ಗ್ರಾ.ಪಂ.ಪಿಡಿಒ ಹರೀಶ್, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಸುರೇಂದ್ರ, ಪ್ರಮುಖರಾದ ಎಂ.ಇ.ವೆಂಕಟೇಶ್, ಜಾನಕಿ ಗಂಗಾಧರ್, ಶಿಕ್ಷಕಿ ಪಿ.ಎಸ್.ರತ್ನ, ಲೀಲಾ ದೇವದಾಸ್, ಶ್ವೇತ,ರತ್ನ.ರೇಖ.ದಿವ್ಯಲತ.ದೆವೇಂದ್ರ. ಅಂಗನವಾಡಿ ಶಾಲಾ ಶಿಕ್ಷಕಿ ವೇಧಕುಮಾರಿ  ಹಾಜರಿದ್ದರು.
ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಲರವ ನಡೆಯಿತು.

ಚಿತ್ರ,ವರದಿಃ ದಿನೇಶ್ ಮಾಲಂಬಿ