ಮಡಿಕೇರಿ ಜ.30 : ಕಾಲು ಸ್ವಾದೀನ ಕಳೆದುಕೊಂಡಿದ್ದ ಕೆ.ಡಿ.ಗೋಪಾಲ ಅವರಿಗೆ ಕೋಪಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ಪರಿಹಾರ ವಿತರಿಸಲಾಯಿತು.
ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ ಪರಿಶಿಷ್ಟ ಜಾತಿ, ಪಂಗಡದವರಿಗೆ, ವಿಶೇಷ ಚೇತನರಿಗೆ, ದುರ್ಬಲ ವರ್ಗದ ಕುಟುಂಬಗಳಿಗೆ ಪರಿಹಾರದಡಿ ಕಾಯ್ದಿರಿಸಿದ ರೂ.5 ಸಾವಿರ ಚೆಕ್‍ಅನ್ನು ಕೋಪಟ್ಟಿ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗೆ ವಿತರಿಸಲಾಯಿತು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರಾದ ಸಿ.ಯು.ಸವಿತಾ, ಸದಸ್ಯ ದಿನೇಶ್, ಪಿಡಿಓ ಯಾದವ್, ಅಂಗನವಾಡಿ ಶಿಕ್ಷಕಿ ಸಿ.ಕೆ.ನಿರ್ಮಲ ಹಾಗೂ ಸಾರ್ವಜನಿಕರು ಹಾಜರಿದ್ದರು.







