ಮಡಿಕೇರಿಯ ಆಯುರ್ ಜೀವನ್ ಮಾಲೀಕ ಸಿಲ್ವಿ ಜೋಸೆಫ್ ನಿಧನ
04/02/2023

ಮಡಿಕೇರಿ ಫೆ.4 : ಮಡಿಕೇರಿ ನಗರದ ಆಯುರ್ ಜೀವನ್ ಆಯುರ್ ವೇದ ಆಸ್ಪತ್ರೆಯ ಮಾಲೀಕ ಸಿಲ್ವಿ ಜೋಸೆಫ್ (52) ಅವರು ಇಂದು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಭಾನುವಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
