Advertisement
4:47 AM Friday 8-December 2023

ಪೇರಡ್ಕದಲ್ಲಿ ಫೆ.17 ರಿಂದ 19ರವರೆಗೆ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಉಪನ್ಯಾಸ

04/02/2023

ಮಡಿಕೇರಿ ಫೆ.4 : ಮುಹಿಯದ್ದೀನ್ ಜುಮ್ಮಾ ಮಸೀದಿ ಪೇರಡ್ಕದಲ್ಲಿ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಫೆ.17 ರಿಂದ 19ರವರೆಗೆ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಫೆ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ಫೆ.17 ರಂದು ಜುಮಾ ನಮಾಜಿನ ಬಳಿಕ ಪೇರಡ್ಕ ಎಂ.ಜೆ.ಎo ಅಧ್ಯಕ್ಷ ಎಸ್.ಆಲಿಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಅಪರಾಹ್ನ 2 ಗಂಟೆಗೆ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಂತರ ಸರ್ವಧರ್ಮ ಸಮ್ಮೇಳನ ಹಾಗೂ ಉಲಮಾ, ಉಮರಾ ಸಂಗಮ ನೆರವೇರಲಿದೆ.
ರಾತ್ರಿ ನಡೆಯುವ ಸಭಾ ಕಾರ್ಯಕ್ರಮವನ್ನು ಪೇರಡ್ಕ ಎಂ.ಜೆ.ಎo ಖತೀಬರಾದ ರಿಯಾಝ್ ಫೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಂ.ಜೆ.ಎo ಅಧ್ಯಕ್ಷ ಎಸ್.ಆಲಿಹಾಜಿ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಬಹು ಸಲೀಮ್ ವಾಫಿ ಅಂಭಲಕoಡ ಪಾಲ್ಗೊಳ್ಳಲಿದ್ದಾರೆ.
ಫೆ.18 ರಂದು ರಾತ್ರಿ ಸಭಾನಕಾರ್ಯಕ್ರಮ ನಡೆಯಲಿದ್ದು, ಅರಂತೋಡು ಬಿ.ಜೆ.ಎಂ ಖತಿಬರಾದ ಅಲ್‌ಹಾಜ್ ಇಸಾಖ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಕೋಶಾಧಿಕಾರಿ ಹಾಜಿ ಇಬ್ರಾಹಿಂ ಮೈಲುಕಲ್ಲು ವಹಿಸಲಿದ್ದಾರೆ. ಪತ್ತನಾಪುರಂ ಇ.ಪಿ.ಅಬೂಬಕ್ಕರ್ ಅಲ್‌ಕಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ.19 ರಂದು ರಾತ್ರಿ 9 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಹಾಗೂ ದುಃವಾ ನೇತೃತ್ವವನ್ನು ದುಗ್ಗಲಡ್ಕ ಬಹು ಸೈಯ್ಯದ್ ಝೈನುಲ್ ಆಬಿದೀನ್ ತಂಙಳ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ವಹಿಸಲಿದ್ದು, ಮುಖ್ಯ ಪ್ರಭಾಷಣಕಾರರಾಗಿ ತಿರುವವನಂತಪುರದ ಬಹು ನೌಶಾದ್ ಬಖಾವಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ ಸಚಿವರು, ರಾಜಕೀಯ, ಧಾರ್ಮಿಕ ಉಲಾಮಗಳು ಸೇರಿದಂತೆ ಸಾಮಾಜಿಕ ನೇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಮಾತನಾಡಿ, ಫೆ.20 ರಂದು 2 ಗಂಟೆಗೆ ಪಳ್ಳಿಬೇರ್ಚೆ ನಡೆಯಲಿದ್ದು, ರಾತ್ರಿ 7.30ಕ್ಕೆ ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಖ್‌ವೀಯ್ಯತ್ತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಜಾತಿ ಮತ ಬೇಧವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗೂನಡ್ಕ-ಪೇರಡ್ಕ ಎಂಆರ್‌ಡಿಎ ಅಧ್ಯಕ್ಷ ಜಾಕೀರ್ ಹುಸೈನ್, ಸಂಪಾಜೆ ಗ್ರಾ.ಪಂ ಸದಸ್ಯ ಎಸ್.ಕೆ.ಮಹಮ್ಮದ್ ಹನೀಫ್ ಹಾಗೂ ಪ್ರಮುಖರಾದ ಉನೈಸ್ ಉಪಸ್ಥಿತರಿದ್ದರು.