Advertisement
1:11 PM Monday 4-December 2023

ಶ್ರೀಮಂಗಲದಲ್ಲಿ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿ : ಸಿ.ವೈ.ಸಿ ಕುಟ್ಟ ತಂಡ ಪ್ರಥಮ

06/02/2023

ಶ್ರೀಮಂಗಲ ಫೆ.6 :   ಶ್ರೀಮಂಗಲ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯು  ಕೊನೆಗೊಂಡಿತು.

ಶ್ರೀಮಂಗಲ ಕೊಡವ ಸಮಾಜ ಮೈದಾನದಲ್ಲಿ ನಡೆದ ಲೀಗ್ ನಿಯಮಗಳನ್ನ ಒಳಗೊಂಡ ಪಂದ್ಯಾವಳಿಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ  ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ  ಗ್ರಾಮೀಣ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಪಂದ್ಯಾವಳಿಯಲ್ಲಿ ಸಿ ವೈ ಸಿ ಕುಟ್ಟ ತಂಡವು ಮೊದಲ ಸ್ಥಾನ ಪಡೆದುಕೊಂಡರೆ, ಹೈಸೊಡ್ಲುರು ಸ್ಟ್ರೈಕರ್ಸ್ ಹಾಗೂ ಟೀಮ್ ಎ ಬಿ ಡಿ ಶ್ರೀಮಂಗಲ  ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಕೊಂಡವು.
ಕಾರ್ಯಕ್ರಮದಲ್ಲಿ ಪೆಮ್ಮಂಡ ರಾಜ, ಆಲೆಮಾಡ ಸೋಮಣ್ಣ , ಕಾಳಿಮಾಡ ಸೀಮಾ ಪ್ರಶಾಂತ್ , ಚೋನಿರ ರತನ್ , ಅಜ್ಜಮಡ ಬೋಪಣ್ಣ , ಮಾಧಿರ ಸುಧಿ ಹಾಗೂ ಇತರರು ಭಾಗಹಿಸಿದ್ದರು.