Advertisement
3:06 AM Saturday 2-December 2023

ಕೊಡಗಿನ ಇಬ್ಬರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ಪ್ರದಾನ

06/02/2023

ಮಡಿಕೇರಿ ಫೆ.6 :  ವಿಜಯಪುರದಲ್ಲಿ ನಡೆದ ರಾಜ್ಯಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಯನ್ನು ಕೊಡಗಿನ ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಜಗದೀಶ್ ಜೋಡುಬೀಟಿ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37ನೇ ಕರ್ನಾಟಕರಾಜ್ಯ ಸಮ್ಮೇಳನದಲ್ಲಿ ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ ಯನ್ನು ವಿಜಯ ಕರ್ನಾಟಕ ವರದಿಗಾರ ಜಗದೀಶ್ ಜೋಡುಬೀಟಿ ಪಡೆದರೆ ವೀರಸೇನಾನಿಯ ಬಗೆಗಿನ ಅತ್ಯುತ್ತಮವರದಿಗೆ ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿಗೆ ಶಕ್ತಿವರದಿಗಾರ ಪುತ್ತರಿರ ಕರುಣ್ ಕಾಳಯ್ಯ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಬಸವನ ಬಾಗೇವಾಡಿ, ಶಾಸಕ ಶಿವಾನಂದ ಪಾಟೀಲ್ ,  ಜಿಲ್ಲಾಧಿಕಾರಿ ಡಾ.ವಿಜಯಮ ಹಾಂತೇಶ ದಾನಮ್ಮ , ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ.ಮಕ್ಬೂಲ್ ಬಾಗವಾನ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್‌ರಫೀಕ್ ಟಪಾಲ್,ಐಯುಡಬ್ಲೂಜೆಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಂಘದ ನಿರ್ದೇಶಕ ಮಂಜುನಾಥ್ ಟಿ.ಎನ್. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಪೊನ್ನಂಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್, ಎನ್. ಎನ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ಕಾರ್ಯದರ್ಶಿ ಪ್ರೇಮ್ ಕುಮಾರ್. ಜೆ ಹಾಗೂ ಸದಸ್ಯ ಸಂತೋಷ್ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.