Advertisement
3:57 AM Saturday 2-December 2023

ಮೂರ್ನಾಡು : ಫೆ.13 ರಿಂದ 15 ರವರೆಗೆ ಜಿಲ್ಲಾ ಮಟ್ಟದ ಕಲಿಕಾ ಹಬ್ಬ

06/02/2023

ಮಡಿಕೇರಿ ಫೆ.6 : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕೊಡಗು ಜಿಲ್ಲೆ ವತಿಯಿಂದ ಫೆಬ್ರವರಿ, 13 ರಿಂದ 15 ರವರೆಗೆ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಸಂತೋಷದಾಯಕವಾದ ಕಲಿಕೆ ಹಾಗೂ ಕಲಿಕೆಯಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವುದು ಕಲಿಕಾ ಹಬ್ಬದ ಪರಿಕಲ್ಪನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಣಾಸಕ್ತರು ಭಾಗವಹಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಪದನಿಮಿತ್ತ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪ ನಿರ್ದೇಶಕರಾದ ರಂಗಧಾಮಯ್ಯ ಅವರು ತಿಳಿಸಿದ್ದಾರೆ.