ಗೋಣಿಕೊಪ್ಪಲು : ಜಿಪಿಎಲ್ ಕ್ಲಬ್ ಗೆ ನೂತನ ಪದಾಧಿಕಾರಿಗಳ ಆಯ್ಕೆ
07/02/2023

ಗೋಣಿಕೊಪ್ಪಲು ಫೆ.7 : ಪ್ರಸ್ತುತ ಐಪಿಎಲ್ ಮಾದರಿಯ ಗೋಣಿಕೊಪ್ಪಲು ಪ್ರೀಮಿಯರ್ ಲೀಗ್ ಕ್ರೀಡಾಕೂಟಕ್ಕೆ ನೂತನ ಅಧ್ಯಕ್ಷರಾಗಿ ಸ್ನೇಕ್ ಸಾಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಜಿಪಿಎಲ್ ಸಂಚಾಲಕರಾಗಿ ಸಿಂಗಿ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಅಣ್ಣಪ್ಪ, ಪ್ರದಾನ ಕಾರ್ಯದರ್ಶಿಯಾಗಿ ಶಮ್ಮು, ಖಜಾಂಚಿಯಾಗಿ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಂಜು, ಸಹ ಕಾರ್ಯದರ್ಶಿಯಾಗಿ ಅಫ್ಸಲ್ (ಅಪ್ಪಿ) ನಿರ್ದೇಶಕರುಗಳಾಗಿ ಬಶೀರ್, ಶಾನಿ, ಫಾಝಿಲ್, ರಂಶಾದ್ , ಚಿದು, ಅಕ್ಷಯ್, ಮುನೀರ್, ದೀಪು, ಹಮೀದ್, ಉಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಪಿಎಲ್ ಸ್ಥಾಪಕ ಅಧ್ಯಕ್ಷ ಶರಫುದ್ದೀನ್ ಹಾಗೂ ನಿಕಟಪೂರ್ವ ಅಧ್ಯಕ್ಷ ಸಿಂಗಿ ಸತೀಶ್ ತಿಳಿಸಿದ್ದಾರೆ
ಮಾರ್ಚ್ ತಿಂಗಳಲ್ಲಿ ಗೋಣಿಕೊಪ್ಪಲು ಸರ್ಕಾರಿ ಶಾಲಾ ಮೈದಾನದಲ್ಲಿ 4 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು, ದೇಶದ ಐಪಿಎಲ್ ಮಾದರಿಯಲ್ಲಿ 10 ತಂಡಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ.
