ಗ್ರಾ.ಪಂ ಉಪ ಚುನಾವಣೆ ವೇಳಾ ಪಟ್ಟಿ ಪ್ರಕಟ
ಮಡಿಕೇರಿ ಫೆ.8 : ರಾಜ್ಯ ಚುನಾವಣಾ ಆಯೋಗವು 2023ರ ಜನವರಿ ಮಾಹೆಯಿಂದ ಏಪ್ರಿಲ್ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಫೆ.8 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. 14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 15 ನಾಮಪತ್ರ ಪರಿಶೀಲಿಸುವ ದಿನವಾಗಿದೆ. 17 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಫೆ.25 ರಂದು ಬೆಳಗ್ಗೆ 7 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ, ಮತದಾನ ನಡೆಯಲಿದೆ. ಫೆ.27 ರಂದು ಬೆಳಗ್ಗೆ 7 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಮರು ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನವಾಗಿದೆ. ಫೆ.28 ರಂದು ಬೆಳಗ್ಗೆ 8 ಗಂಟೆಯಿAದ ತಾಲ್ಲೂಕು ಕೇಂದ್ರಗಳಲಿ ಮತಗಳ ಎಣಿಕೆ ನಡೆಯಲಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ(04 ಸ್ಥಾನ), ನಿಟ್ಟೂರು(1 ಸ್ಥಾನ), ಗೋಣಿಕೊಪ್ಪಲು (1 ಸ್ಥಾನ), ಮಡಿಕೇರಿ ತಾಲ್ಲೂಕಿ ಎಮ್ಮೆಮಾಡು (2 ಸ್ಥಾನ) ಒಟ್ಟಾರೆ 4 ಗ್ರಾಮ ಪಂಚಾಯಿತಿಗಳ ಒಟ್ಟು 8 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.
