Advertisement
3:41 AM Saturday 2-December 2023

ಕೊಡಗಿನ ಮೂವರಿಗೆ ಮಾಧ್ಯಮ ಪ್ರಶಸ್ತಿ

09/02/2023

ಮಡಿಕೇರಿ ಫೆ.9 :   ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಕೊಡಗಿನ ಮೂವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲೆಯ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಪೂಮಾಲೆ ಕೊಡವ ವಾರಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಹಿರಿಯ ಛಾಯಾಗ್ರಾಹಕ ಕೊಡಗು ಮೂಲದ ನಾಗೇಶ್ ಪಾಣತ್ತಲೆ ಅವರಿಗೆ ಪ್ರಶಸ್ತಿಗಳು ಸಂದಿವೆ.

ರಾಜ್ಯಾದ್ಯಂತ 124 ಪತ್ರಕರ್ತರನ್ನು ಮಾಧ್ಯಮ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ತಿಳಿಸಿದ್ದಾರೆ.