Advertisement
11:41 AM Monday 4-December 2023

ನಿಟ್ಟೂರು ಗ್ರಾ.ಪಂ ಉಪಚುನಾವಣೆ : ಜೆ.ಕೆ.ಅಯ್ಯಪ್ಪ ನಾಮಪತ್ರ ಸಲ್ಲಿಕೆ 

10/02/2023

ಮಡಿಕೇರಿ ಡಿ.10 :  ನಿಟ್ಟೂರು ಗ್ರಾ.ಪಂ ವಾರ್ಡ್ ಸಂಖ್ಯೆ 1 ರ ಸದಸ್ಯ  ಸಾಸು ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ತಟ್ಟಕೆರೆ ಹಾಡಿ ನಿವಾಸಿ ಜೆ.ಕೆ.ಅಯ್ಯಪ್ಪ ನಾಮಪತ್ರ ಸಲ್ಲಿಸಿದರು.

ನಾಪಪತ್ರ ಸಲ್ಲಿಸುವಾಗ ಅಯ್ಯಪ್ಪ ಅವರೊಂದಿಗೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮತ್ತು ನಿಟ್ಟೂರು ಗ್ರಾ.ಪಂ ಅಧ್ಯಕ್ಷ  ಕಾಟಿಮಾಡ ಶರೀನ್ ಮುತ್ತಣ್ಣ,  ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ  ಅಳಮೇಂಗಡ ಸುರೇಶ, ಬಿಜೆಪಿ ಬೂತ್ ಅಧ್ಯಕ್ಷರುಗಳಾದ ಕಾಯಮಡ ರಾಜ, ಅಳಮೇಂಗಡ ಮೋಹನ್, ರಾಜ್ಯ ಬಿಜೆಪಿ ಕೃಷಿ ಮಹೋರ್ಚದ ನಿರ್ದೇಶಕಿ ಮಾಪಂಗಡ ಯಮುನಾ ಚಂಗಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ  ಚಕ್ಕೇರ ಅಯ್ಯಪ್ಪ, ಮಾಜಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಸದಸ್ಯರಾದ ಅಮ್ಮಣಿ, ತಟ್ಟಕೆರೆ ಹಾಡಿ ಪ್ರಮುಖರಾದ ದಾಸಪ್ಪ, ಪಕ್ಷದ ಪ್ರಮುಖರಾದ ಅಳಮೇಂಗಡ ಬೋಸ್ ಮಂದಣ್ಣ, ಸತೀಶ್ ತಟ್ಟಕೆರೆ  ಮತ್ತು   ಹಿಂದುಪರ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ್ ಮತ್ತು ಹಿತೈಷಿಗಳು ಹಾಜರಿದ್ದರು.