Advertisement
12:30 PM Monday 4-December 2023

ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಶಾಖೆಯ ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಆಯ್ಕೆ

13/02/2023

ನಾಪೋಕ್ಲು  ಫೆ.13 :  ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಶಾಖೆಯ ನೂತನ ಅಧ್ಯಕ್ಷರಾಗಿ ಬೇಕಲ್ ಅಬ್ದುಲ್ಲಾ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಪೋಕ್ಲು ಪಟ್ಟಣದಲ್ಲಿರುವ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಛೇರಿಯಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಟಿ.ಎ ಮಹಮ್ಮದ್ ಹನೀಫ್,ಉಪಾಧ್ಯಕ್ಷರಾಗಿ ವಕೀಲರಾದ ರಿಯಾಝ್, ಮಹಮ್ಮದ್ ಹಾಜಿ, ಖಜಂಚಿಯಾಗಿ ಇಬ್ರಾಹಿಂ ಮುಸ್ಲಿಯರ್, ಸಮಿತಿ ಸದಸ್ಯರಾಗಿ ಪಿ.ಎಂ.ಅಬ್ದುಲ್ ಅಝೀಝ್ , ಎಂ.ಎ.ಮನ್ಸೂರ್ ಆಲಿ, ಇಬ್ರಾಹಿಂ ಹಾಜಿ, ಪಿ.ಎಂ.ಬದ್ರುದ್ದೀನ್ , ಸಿ.ಎಚ್.ಅಹಮದ್ , ಕೆ.ಎ.ಖಾದರ್ ,  ಹಂಝ ಕೆ.ಎ, ಅಬ್ದುಲ್ ರಹ್ಮಾನ್, ಹಂಝ ಟಿ.ಎ, ಫಯಾಜ್, ಇಬ್ರಾಹಿಂ,ಹಸೈನಾರ್ ಹಾಜಿ ಆಯ್ಕೆಯಾದರು.

ನೂತನ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷರಾದ ಅಬ್ದುಲ್ ಹಝೀಝ್ ಹಾಗೂ ಆಡಳಿತ ಮಂಡಳಿಯವರು ಅಧಿಕಾರವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಕೆಸಿಎಫ್ ಅಧ್ಯಕ್ಷರಾದ ಉಸ್ಮಾನ್ ಹಾಜಿ, ಸಾದಿಕ್ ನಿಜಾಮಿ,ಮಾಜಿ ಕಾರ್ಯದರ್ಶಿ ಶಾಹಿದ್ ಹಿಮಮಿ, ಅರಫಾತ್ ಪಿ.ಎಂ, ರಹೀಮ್ ಮಾಸ್ಟರ್, ಯೂನಸ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.

ವರದಿ :ಝಕರಿಯ ನಾಪೋಕ್ಲು