Advertisement
9:59 AM Sunday 3-December 2023

ಫೆ.17 ಮತ್ತು 18 ರಂದು ಹೊದ್ದೂರು ಶ್ರೀ ಶಾಸ್ತ ಈಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ

13/02/2023

ಮಡಿಕೇರಿ ಫೆ.13 : ಹೊದ್ದೂರು ಗ್ರಾಮದ ಐತಿಹಾಸಿಕ ಶ್ರೀ ಶಾಸ್ತ-ಈಶ್ವರ ದೇವರ 2ನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಫೆ.17 ಮತ್ತು 18 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಪೂಜಾ ಕೈಕಂಕರ್ಯಗಳ ಕುರಿತು ಮಾಹಿತಿ ನೀಡಿದರು.
ಫೆ.17 ರಂದು ಬೆಳಿಗ್ಗೆ 9 ಗಂಟೆಗೆ ಗಣಹೋಮ, ಸಹಸ್ರ ನಾಮ ಅರ್ಚನೆ, ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ ದೈವ ಸನ್ನಿಧಿ ಅಭಿಷೇಕ ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 6 ಗಂಟೆಗೆ ದೇವರ ವಿವಿಧ ನೃತ್ಯ ಬಲಿ, ಸಂಪ್ರೋಕ್ಷಣೆ ಅನ್ನದಾನ ನಡೆಯಲಿದ್ದು, ನಂತರ ವಿಷ್ಣು ಮೂರ್ತಿ ದೈವದ ತೋಯತ ತೆರೆ ನಡೆಯಲಿದೆ.
ಫೆ.18 ರಂದು ಪ್ರಾತಃಕಾಲ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಜರುಗಲಿದ್ದು, ನಾಡಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ದೇವತಾ ಕಾರ್ಯದ ಪೂಜಾಕಾರ್ಯ ಹಾಗೂ ಅನ್ನಸಂತರ್ಪಣೆಗೆ ಅಕ್ಕಿ, ತೆಂಗಿನಕಾಯಿ, ಎಣ್ಣೆ, ತರಕಾರಿಗಳಂತಹ ದಿನಸಿ ಸಾಮಾಗ್ರಿಗಳನ್ನು ಉದಾರವಾಗಿ ನೀಡಬಯಸುವವರು 9845571290 ಸಂಪರ್ಕಿಸುವಂತೆ ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದರು.