ಶ್ರದ್ಧಾಭಕ್ತಿಯಿಂದ ಜರುಗಿದ ಬೈತೂರೇಶ್ವರ ದೇವಾಲಯದ ವಾರ್ಷಿಕೋತ್ಸವ
14/02/2023

ವಿರಾಜಪೇಟೆ ಫೆ.14 : ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ವಾರ್ಷಿಕೋತ್ಸವದ ಪ್ರಯುಕ್ತ ದೇವರಿಗೆ ವಿವಿಧ ಪೂಜೆ ವಿಧಿ ವಿಧಾನಗಳು ಹಾಗೂ ಮಹಾಪೂಜೆ ನಡೆದು ಭಕ್ತರಿಗೆ ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ.ಜಿ.ಮಂಜು, ಕಾರ್ಯದರ್ಶಿ ವಿ.ಆರ್ ಸಂದೀಪ, ನೂತನ ಅಧ್ಯಕ್ಷ ವಿ.ಎಂ. ಶಿವರಾಜ್, ಆಡಳಿತ ಮಂಡಳಿಯ ಸದಸ್ಯರಾದ ವಿ.ಬಿ. ನಾಗೇಶ್, ವಿ.ಕೆ.ಕಿರಣ್, ವಿ.ಎಸ್. ಪ್ರಸನ್ನ, ವಿ.ಪಿ. ಉಮೇಶ್, ವಿ.ಜೆ. ರವಿ, ವಿ.ಎ. ಭರತ್, ವಿ.ಎನ್. ಗೋಪಿ, ವಿ.ಆರ್. ಸುಧಿ ಹಾಗೂ ಗ್ರಾಮದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
