ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ : ಕಡಂಗ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್

ಕಡಂಗ ಫೆ.14 : ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್ ನ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭವು ಕಡಂಗ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಎಂಟು ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆದಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಬಲಿಷ್ಠ ಬ್ಲಾಸ್ಟರ್ ತಂಡವನ್ನು ರೈಸಿಂಗ್ ಸ್ಟಾರ್ ಮಣಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿದರು.
2ನೇ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಸ್ಟಾರ್ ತಂಡವನ್ನು ಬ್ಲಾಸ್ಟರ್ ತಂಡ ಮಣಿಸಿ, ಫೈನಲ್ ಹಂತಕ್ಕೆ ಪ್ರವೇಶಿಸಿದರು.
ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಸ್ಟಾರ್ ತಂಡ ಐದು ಓವರ್ ನಲ್ಲಿ 62 ರನ್ನು ಕಲೆ ಹಾಕಿದರು. ಈ ಮೊತ್ತವನ್ನು ಬೆನ್ನಟ್ಟಿದ ಬ್ಲಾಸ್ಟರ್ಸ್ ತಂಡ 4 ಓವರ್ ಎರಡು ಎಸೆತಗಳಲ್ಲಿ 35ರನ್ ಗಳಿಸಿ ಆಲ್ ಔಟ್ ಆಗಿ ರನ್ನರ್ ಪ್ರಶಸ್ತಿ ಪಡೆದರು.
ವೈಯುಕ್ತಿಕ ಪ್ರಶಸ್ತಿಗಳ ವಿವರ : ಪಂದ್ಯ ಶ್ರೇಷ್ಠ ಪ್ರಶಸ್ತಿ ರೈಸಿಂಗ್ ಸ್ಟಾರ್ ತಂಡದ ಸುಹೈಲ್ , ಕ್ರೀಡಾಕೂಟದ ಉತ್ತಮ ಬಾಲರ್ ನೌಶಾದ್, ಉತ್ತಮ ಕ್ಯಾಚ್ ರಾಜ್, ಸ್ಟೈಲಿಶ್ ಬ್ಯಾಟ್ಸ್ಮನ್ ಯುನೆಸ್, ಕ್ರೀಡಾಕೂಟದ ಅತ್ಯಧಿಕ ರನ್ ಅಸ್ಕರ್ , ಅರ್ಧ ಶತಕ ಬಾರಿಸಿದ ಆಟಗಾರ ಕುಟ್ಟಪ್ಪ, ಉದಯೋನ್ಮುಖ ಆಟಗಾರರು ಅಫ್ರಾಜ್ ಮತ್ತು ಪ್ರಜ್ವತ್ ರಾಯ್.
ಕ್ರೀಡಾ ಕೋಟದ ತೀರ್ಪುಗಾರರಾಗಿ ಹನೀಫಾ ಮಡಿಕೇರಿ, ಸುಲ್ತಾನ್, ಸರ್ಫ್ಯೂದ್ದೀನ್ ಕಾರ್ಯನಿರ್ವಹಿಸಿದರು. ಸ್ಕೊರರಾಗಿ ನಾಫಿ, ರಾಜಿಕ್, ಅನಸ್, ಆಸ್ಕರ್ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭ : ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಸಮಾಜದಲ್ಲಿ ಸ್ನೇಹ, ಸೌಹರ್ದತೆ ಹೆಚ್ಚಗಲಿದ್ದು, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ನಡೆಯಲಿ ಎಂದರು.
ಕೆಪಿಎಲ್ ಸಂಸ್ಥಾಪಕ ಕೆ.ಎಂ.ಜುನಿದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಸಲಾಂ ಮತ್ತು ಸುಬ್ಬಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಯೋಜಕ ಅಧ್ಯಕ್ಷ ಆಸ್ಕರ್, ಅಂಕಿತ್ ಪೊನ್ನಪ್ಪ, ಕೋಡಿರ ವಿನೋದ್ ನಾಣ್ಯಯ, ಪಾಡ೦ಡ ರಾಣಿ ಗಣಪತಿ, ಕವಿತಾ ,ಸಂಜು ಕಾಳಯ್ಯ, ವಿಠಲ, ಸಿಇ ,ಜುನೈದ್ ಸಿ ಎ ,ಮುಸ್ತಫ, ಅಂದುನ್ಜಿ,ಜೀವನ್, ಅಶ್ರಫ್ ಬ್ಯಾಂಕ್, ಕರೀಂ,ಸಮದ್, ಷರೀಫ್, ರಾಜಿಕ್ ,ಜಲೀಲ್ ಪಾಲ್ಗೊಂಡಿದ್ದರು.
ಸಂಘದ ಪ್ರಮುಖರಾದ ಪಿ.ಹೆಚ್.ಶಮೀರ್ ಸ್ವಾಗತಿಸಿ, ನಿರೂಪಿಸಿದರು.
ವರದಿ : ನೌಫಲ್ ಕಡಂಗ
