Advertisement
3:15 AM Saturday 2-December 2023

ಇಬ್ಬರನ್ನು ಬಲಿ ಪಡೆದ ಹುಲಿ ಸೆರೆ

14/02/2023

ಮಡಿಕೇರಿ ಫೆ.14 :  ಎರಡು ದಿನಗಳ ಹಿಂದೆ ಕೆ.ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಇಂದು ಜೀವಂತವಾಗಿ ಸೆರೆ ಹಿಡಿದಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ 3 ಸಾಕಾನೆಗಳನ್ನು ಬಳಸಿ  ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು  ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ನಾಣಚ್ಚಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನ ಸೆರೆ ಹಿಡಿದಿದ್ದಾರೆ.