ಎಸ್ಎಸ್ಎಫ್ ಮಡಿಕೇರಿ ಶಾಖೆಯ ಅಧ್ಯಕ್ಷರಾಗಿ ನವಾಝ್ ಮದನಿ ಆಯ್ಕೆ

ನಾಪೋಕ್ಲು ಫೆ.14 : ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ಎಫ್ )ಮಡಿಕೇರಿ ಶಾಖೆಯ ನೂತನ ಅಧ್ಯಕ್ಷರಾಗಿ ನವಾಝ್ ಮದನಿ ಆಝಾದ್ ನಗರ ಆಯ್ಕೆಯಾಗಿದ್ದಾರೆ.
ಕೊಟ್ಟ ಮುಡಿಯ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಎಸ್ಎಸ್ಎಫ್ ಮಡಿಕೇರಿ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಸ್ಲಂ ಮೂರ್ನಾಡು, ಕೋಶಾಧಿಕಾರಿಯಾಗಿ ಅಫ್ಸಲ್ ಬೇತ್ರಿ, ಸಹ ಕಾರ್ಯದರ್ಶಿಗಳಾಗಿ ರಾಶಿದ್ ಅನ್ವಾರಿ, ಬಶೀರ್ ಅಝಾದ್ ನಗರ, ಯೂನಸ್ ನಾಪೋಕ್ಲು, ಆಸಿಫ್ ಹಳೇತಾಲ್ಲೂಕು, ಸಫ್ವಾನ್ ಸಖಾಫಿ ಮಡಿಕೇರಿ, ಝಕರಿಯ ಸಅದಿ ಎಮ್ಮೆಮಾಡು, ಶಾಫಿ ಸಾದಾತ್ ನಗರ ಸೇರಿದಂತೆ 20ಸದಸ್ಯರನ್ನು ಒಳಗೊಂಡ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷರಾದ ನಝೀರ್ ಸಖಾಫಿ ಹಾಗೂ ಆಡಳಿತ ಮಂಡಳಿಯವರು ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ, ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಜಿಲ್ಲಾ ನಾಯಕರಾದ ಶಿಹಾಬ್ ತಂಙಳ್, ಜುನೈದ್ ಮಾಸ್ಟರ್,ಶಮೀಹ್ ಅನ್ವಾರಿ ತಂಙಳ್, ಸೈಫುದ್ದೀನ್ ಸಖಾಫಿ ಸೇರಿದಂತೆ ಎಸ್ಎಸ್ಎಫ್ ನ ಸದಸ್ಯರುಗಳು, ಮತ್ತಿತರ ಪ್ರಮುಖರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು
