Advertisement
4:55 AM Friday 8-December 2023

ಮಡಿಕೇರಿ : ಫೆ.15 ರಂದು ಆಕಾಶವಾಣಿಯಿಂದ ಅನ್ನದಾತರಿಗೆ ಸನ್ಮಾನ

14/02/2023

ಮಡಿಕೇರಿ ಫೆ.14 : ಮಡಿಕೇರಿ ಆಕಾಶವಾಣಿಯು ರೇಡಿಯೋ ಕಿಸಾನ್ ದಿವಸದ ಪ್ರಯುಕ್ತ ಫೆ.15 ರಂದು ಸಂಜೆ 5 ಗಂಟೆಗೆ ಆಕಾಶವಾಣಿಯ ಆವರಣದಲ್ಲಿ ಅನುಭವಿ ಕೃಷಿಕರಾದ ಎಂ.ಬಾಡಗ ಗ್ರಾಮದ ಬಾರಿಯಂಡ ಸಂಜನ್ ಪೊನ್ನಪ್ಪ, ಗರಗಂದೂರಿನ ಕೆ.ಎಸ್.ಮಂಜುನಾಥ, ಚೇರಂಗಾಲದ ಮೂಲೆಮಜಲು ಗಣೇಶ್ ಹಾಗೂ ಮೈತಾಡಿಯ ಎಚ್.ಕೆ.ಹನೀಫ್ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ರೇಡಿಯೋ ಮತ್ತು ಕೃಷಿ’ ಎಂಬ ವಿಷಯದ ಬಗ್ಗೆ ಅತಿಥಿಗಳ ಮತ್ತು ಸನ್ಮಾನಿತರ ವಿಚಾರಗಳನ್ನು ಸಂಜೆ 6.50 ರಿಂದ 7.35 ರವರೆಗೆ ನೇರ ಪ್ರಸಾರದಲ್ಲಿ ಬಿತ್ತರಿಸಲಾಗುವುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.