Advertisement
11:20 AM Monday 4-December 2023

ಕಲ್ಲಕೆರೆ ಮಾದೇವಿ ಚಲನಚಿತ್ರ : ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ

15/02/2023

ನಾಪೋಕ್ಲು ಫೆ.15 : ಕೊಡಗಿನ ಆದಿ ಗ್ರಂಥ ಪಟ್ಟೋಳೆ ಪಳಮೆಯನ್ನು ಆಧರಿಸಿದ ಪೌರಾಣಿಕ ಕೊಡವ ಚಲನಚಿತ್ರ ಕಲ್ಲಕೆರೆ ಮಾದೇವಿ ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪಿ ಅಂಡ್ ಜಿ ಕ್ರಿಯೇಷನ್ ಚಲನಚಿತ್ರ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ತಿಳಿಸಿದ್ದಾರೆ.

ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಕೆರೆ ಮಾದೇವಿ ಚಲನಚಿತ್ರ ಕೊಡಗಿನ ಪ್ರಥಮ ಪೌರಾಣಿಕ ಕಥೆಯಾಗಿ ಮೂಡಿ ಬಂದಿದ್ದು, ಮೂರ್ನಾಡು, ನೆಲಜಿ ಮತ್ತಿತರ ಭಾಗಗಳಲ್ಲಿ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ ಎಂದರು.

ಪಿ ಅಂಡ್ ಜಿ ಕ್ರಿಯೇಷನ್ ಚಲನಚಿತ್ರ ನಿರ್ದೇಶಕರಾದ ಆಚೆಯಡ ಗಗನ್ ಗಣಪತಿ ಮಾತನಾಡಿ, ಚಿತ್ರತಂಡ ಆಸಕ್ತಿಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ತಂಡದ ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಶೇಷ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಾರ್ವಜನಿಕರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟ ಚೇನಂಡ ಗಿರೀಶ್ ಉತ್ತಮ ಪೌರಾಣಿಕ ಕೊಡವ ಚಲನಚಿತ್ರವೊಂದು ಬಿಡುಗಡೆಗೊಂಡಿದೆ. ಕೊಡವ ಜನಾಂಗ ಸೇರಿದಂತೆ ಎಲ್ಲಾ ಸಾರ್ವಜನಿಕ ಚಿತ್ರ ಪ್ರೇಮಿಗಳು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಚಿತ್ರಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದರು.

ವರದಿ : ದುಗ್ಗಳ ಸದಾನಂದ