ಮಾ.1 ರಿಂದ 11 ರವರೆಗೆ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ

ಮಡಿಕೇರಿ ಫೆ.15 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವವು ಇದೇ ಮಾ.1 ರಿಂದ 11 ರವರೆಗೆ ನಡೆಯಲಿದೆ.
ಮಾ.1 ರಾತ್ರಿ 8 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಗುವುದು. 2ರಂದು ಬೆಳಗ್ಗೆ 11 ಗಂಟೆಯಿoದ ನಿತ್ಯ ಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ, 3ರಂದು ಪ್ರಾತ:ಕಾಲ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, 11 ಯಿಂದ ನಿತ್ಯ ಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ, 4 ರಂದು ಪ್ರಾತ:ಕಾಲ 5 ಗಂಟೆಗೆ ಉತ್ಸವಮೂರ್ತಿ ದರ್ಶನ, ಬೆಳಗ್ಗೆ 10 ಗಂಟೆಗೆ ಭಂಡಾರ ಬರುವುದು, 11 ಗಂಟೆಯಿoದ ನಿತ್ಯ ಪೂಜೆ ಸಂಜೆ 7 ಗಂಟೆಗೆ ತೂಚಂಬಲಿ, ಮಾ.5 ರಂದು ಪ್ರಾತಃಕಾಲ 5 ಗಂಟೆಗೆ ಇರುಬಳಕು, 11 ಗಂಟೆಯಿoದ ನಿತ್ಯಪೂಜೆ ಮತ್ತು ತುಲಾಭಾರ ಸೇವೆ ಮತ್ತು ಸಂಜೆ 7 ಗಂಟೆಗೆ ತೂಚಂಬಲಿ ನಡೆಯಲಿದೆ.
ಮಾ.6 ರಂದು ಪ್ರಾತ:ಕಾಲ 5 ಗಂಟೆಗೆ ಇರುಬಳಕು, ಬೆಳಗ್ಗೆ 11 ಗಂಟೆಯಿoದ ನಿತ್ಯ ಪೂಜೆ, ತುಲಾಭಾರ, 7ರಂದು ಪ್ರಾತ:ಕಾಲ 5 ಗಂಟೆಗೆ ಇರುಬಳಕು, ಬೆಳಗ್ಗೆ 11 ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಉತ್ಸವ ಮೂರ್ತಿ ದರ್ಶನ, 8 ರಂದು ಪ್ರಾತ:ಕಾಲ 5 ಗಂಟೆಗೆ ಇರುಬಳಕು, ಬೆಳಗ್ಗೆ 11 ಗಂಟೆಯಿoದ ನಿತ್ಯ ಪೂಜೆ, ಹರಕೆ ಬಳಕು, ತುಲಾಭಾರ ಸೇವೆ, ಸಂಜೆ 7 ಗಂಟೆಗೆ ತೂಚಂಬಲಿ ಮತ್ತು ಉತ್ಸವಮೂರ್ತಿ ದರ್ಶನ ಇರಲಿದೆ.
ಮಾ.9 ರಂದು ಪ್ರಾತ:ಕಾಲ 5 ಗಂಟೆಗೆ ಇರುಬಳಕು, ಹರಕೆ ಬಳುಕಿನ ಪ್ರಸಾದ ವಿತರಣೆ, ಬೆಳಗ್ಗೆ 11 ಗಂಟೆಗೆ ನಿತ್ಯಪೂಜೆ, ಹರಕೆ ಬಳಕು, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಉತ್ಸವಮೂರ್ತಿ ದರ್ಶನ, ಮಾ.10 ರಂದು ಪ್ರಾತ:ಕಾಲ ಇರುಬಳಕು, ಹರಕೆ ಬೆಳಕಿನ ಪ್ರಸಾದ ವಿತರಣೆ, ಬೆಳಗ್ಗೆ 11 ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ 5 ಗಂಟೆಗೆ “ನೆರಪು”, ರಾತ್ರಿ 8 ಗಂಟೆಗೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ, ಮಾ.11ರಂದು ಬೆಳಗ್ಗೆ 10 ಗಂಟೆಗೆ ನಿತ್ಯ ಪೂಜೆ, ಮಧ್ಯಾಹ್ನ 12 ಗಂಟೆಗೆ ತುಲಾಭಾರ, ಮಧ್ಯಾಹ್ನ 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ 5 ಗಂಟೆಗೆ ದೇವರ ಉತ್ಸವಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವಮೂರ್ತಿ ದರ್ಶನ, ನಂತರ ವಸಂತ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಸಂಜೆ 6ಗಂಟೆಯಿoದ ರಾತ್ರಿ 8.30 ರವರೆಗೆ ಭೋಜ ಸೌಂಡ್ಸ್ ಹುಣಸೂರು ಇವರ ಪ್ರಾಯೋಜಕತ್ವದಲ್ಲಿ ಜೀ಼ ಕನ್ನಡದವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾ.12ರಂದು ಬೆಳಿಗ್ಗೆ 10.30 ಗಂಟೆಗೆ ಕೊಡಿಮರ ಇಳಿಸಲಾಗುವುದು. 11 ಗಂಟೆಯಿoದ ಎಂದಿನoತೆ ನಿತ್ಯ ಪೂಜೆ ನಡೆಯಲಿದೆ. ತುಲಾಭಾರ ಸೇವೆ ಮಾಡಿಸುವವರು ಅಕ್ಕಿ, ಬೆಲ್ಲ, ಎಣ್ಣೆ, ತರಕಾರಿ ಇತ್ಯಾದಿ ವಸ್ತುಗಳನ್ನು ಭಕ್ತಾಧಿಗಳು ತರಬೇಕೆಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. ತುಲಾಭಾರ ಸೇವೆಯು ಮಾ.5 ರಿಂದ 11ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 81978 70058 ಸಂಪರ್ಕಿಸಬಹುದು.
