Advertisement
2:23 AM Saturday 2-December 2023

ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮಾ.7ರಂದು ಕಲ್ಲಾಡ್ಚ ಹಬ್ಬ

15/02/2023

ನಾಪೋಕ್ಲು ಫೆ.15 : ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ  ಉತ್ಸವ ಮಾ.7ರಂದು  ನಡೆಯಲಿದೆ.

ಅಂದು ಬೆಳಿಗ್ಗೆ ಜೋಡತ್ತು ಪೋರಾಟ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಲಿದ್ದು,  ಅಪರಾಹ್ನ ದೇವರ ಉತ್ಸವ ಮೂರ್ತಿಯನ್ನು ಮಲ್ಮ ಬೆಟ್ಟಕ್ಕೆ ಕೊಂಡೊಯ್ದು ದೇವ ಕಟ್ಟು ಸಡಿಲಿಸಿ, ಸಂಜೆ ನೃತ್ಯ ಬಲಿ ಮೂಲಕ  ಉತ್ಸವ ಸಂಪನ್ನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಕೋರಿದ್ದಾರೆ.

ಸತ್ಯನಾರಾಯಣ ಪೂಜೆ ಹೊರತುಪಡಿಸಿ ಎಲ್ಲಾ ರೀತಿಯ ಪೂಜೆಗಳನ್ನು, ತುಲಾಭಾರ ಸೇವೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು.
ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಫೆ.21ರ ಮಂಗಳವಾರ ಮಲ್ಮ ಬೆಟ್ಟದಲ್ಲಿ ದೇವಕಟ್ಟು ವಿಧಿಸಲಾಗುವುದು. ಆ ಬಳಿಕ ಮಾ.7ರಂದು ಉತ್ಸವ ಸಂಪನ್ನ ವಾಗುವವರೆಗೆ ಭಕ್ತರು ಪ್ರಾಣಿ ಹಿಂಸೆ, ಮದುವೆ ಮುಂತಾದ ಸಮಾರಂಭಗಳನ್ನು ನಡೆಸದಂತೆ ದೇವತಕ್ಕರು ಕೋರಿದ್ದಾರೆ.

ವರದಿ : ದುಗ್ಗಳ ಸದಾನಂದ