Advertisement
1:23 AM Thursday 7-December 2023

ಶ್ರೀ ಶಾಸ್ತ-ಈಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ ಫೆ.17 ರಿಂದ ಆರಂಭ

16/02/2023

ಮಡಿಕೇರಿ ಫೆ.16 : ಹೊದ್ದೂರು ಗ್ರಾಮದ ಐತಿಹಾಸಿಕ ಶ್ರೀ ಶಾಸ್ತ-ಈಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಫೆ.17 ರಿಂದ ಆರಂಭಗೊಳ್ಳಲಿದೆ.
ಬೆಳಿಗ್ಗೆ 9 ಗಂಟೆಗೆ ಗಣಹೋಮ, ಸಹಸ್ರ ನಾಮ ಅರ್ಚನೆ, ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ ದೈವ ಸನ್ನಿಧಿ ಅಭಿಷೇಕ ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಸಂಜೆ 6 ಗಂಟೆಗೆ ದೇವರ ವಿವಿಧ ನೃತ್ಯ ಬಲಿ, ಸಂಪ್ರೋಕ್ಷಣೆ ಅನ್ನದಾನ ನಂತರ ಶ್ರೀ ವಿಷ್ಣುಮೂರ್ತಿ ದೈವದ ತೆರೆ ನಡೆಯಲಿದೆ.
ಫೆ.18 ರಂದು ವಾರ್ಷಿಕೋತ್ಸವ ಹಾಗೂ ತೆರೆ ಸಂಪನ್ನಗೊಳ್ಳಲಿದೆ ಎಂದು ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದ್ದಾರೆ.