ಭಾಗಮಂಡಲ : ಕರಾಟೆ ಪರೀಕ್ಷೆಯಲ್ಲಿ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ
16/02/2023

ಮಡಿಕೇರಿ ಫೆ.16 : ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಹಂತದ ಬೆಲ್ಟ್ ಗಳನ್ನು ಪಡೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಶ್ವೇತ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಕರಾಟೆ ಬೆಲ್ಟ್ ಗಳನ್ನು ವಿತರಿಸಿದರು.
ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ಭಾರತದ ಮುಖ್ಯ ತರಬೇತುದಾರ ಶಿಪು ಇಂದ್ರಜಿತ್ ಪರೀಕ್ಷಕರಾಗಿ ಭಾಗವಹಿಸಿದ್ದರು. ಈ ಸಂದರ್ಭ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ತರಬೇತುದಾರ ನಾಟೋಳಂಡ ನಂಜುಂಡ ಮತ್ತು ಶಾಲಾ ಶಿಕ್ಷಕ ಕಿಶೋರ್ ಕುಮಾರ್ ಹಾಜರಿದ್ದರು.
