Advertisement
12:00 PM Monday 4-December 2023

ಬೇತು : ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಪಿಕಪ್ ವಾಹನದ ಚಕ್ರ : ತಪ್ಪಿದ ಅನಾಹುತ

16/02/2023

ನಾಪೋಕ್ಲು ಫೆ.16 : ಪಾರಾಣೆಯತ್ತ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನವೊಂದು ಬೇತು ಕುಟ್ಟಜ್ಜೆಟ್ಟಿರ ಮಂದ್ ಸಮೀಪ ಅವಘಡಕ್ಕೀಡಾಗಿದ್ದು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಎಮ್ಮೆಮಾಡಿನ ಅಚ್ಚುಪ್ಪು ಎಂಬವರು ಚಲಾಯಿಸುತ್ತಿದ್ದ ಪಿಕಪ್ ವಾಹನದ ಚಕ್ರ ಕಳಚಿ ರಸ್ತೆಯ ಅಂಚಿಗೆ ಸರಿದಿದೆ. ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ವರದಿ : ದುಗ್ಗಳ ಸದಾನಂದ