Advertisement
9:44 AM Sunday 3-December 2023

ತಲಕಾವೇರಿಯಲ್ಲಿ ಜಿಯೊ ಟ್ರೂ 4ಜಿ : ಶಿಕ್ಷಣ ಮತ್ತು ಉದ್ಯೋಗಕ್ಕೆ ಸಹಕಾರಿಯಾಗಲಿದೆ ತಡೆರಹಿತ ಸೇವೆ

16/02/2023

ಮಡಿಕೇರಿ ಫೆ.16 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ರಿಲಯನ್ಸ್ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ.
ಈಗ ಮೇಲ್ದರ್ಜೆಗೇರಿಸಿದ ನೆಟ್‍ವರ್ಕ್ ಮೂಲಕ ಇಲ್ಲಿನ ಮಕ್ಕಳು ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಯುವಕರು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಅಥವಾ ಸುರಕ್ಷಿತ ವಾತಾವರಣದಲ್ಲಿ ಅನಿಯಮಿತ ಮನರಂಜನೆ ಪಡೆಯಲು ಸಾಧ್ಯವಾಗುತ್ತಿದೆ ಎಂದು ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ತಲಕಾವೇರಿಯ ಜನರು ಹೊರ ಜಗತ್ತಿಗೆ ಮೂಲಭೂತವಾದ ಸಂಪರ್ಕದಿಂದ ವಂಚಿತರಾಗಿದ್ದರು. ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು, ಹಸಿರು ಟವರ್ ನೊಂದಿಗೆ ಟ್ರೂ 4ಜಿ  ಒದಗಿಸುತ್ತದೆ ಎಂದು ಜಿಯೊ ವಕ್ತಾರರು ಹೇಳಿದ್ದಾರೆ.
ಈ ಉಪಕ್ರಮದ ಮೂಲಕ ಜಿಯೋ ತನ್ನ ದೃಢವಾದ ನೆಟ್‍ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ತಲಕಾವೇರಿಯಲ್ಲಿನ ಸ್ಥಳೀಯ ಕುಟುಂಬಗಳಿಗೆ ಎಲ್ಲೆಡೆಯೂ ಎಲ್ಲ ಸಮಯದಲ್ಲಿಯೂ  ತಡೆರಹಿತ ಅನುಭವ ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಪ್ರಕಟಣೆ ಹೇಳಿದೆ.