ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ
16/02/2023

ಕಡಂಗ ಫೆ.16 : ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಕಡಂಗ, ಅರಪಟ್ಟು, ಪೊದವಾಡ ಗ್ರಾಮದಲ್ಲಿ ಕಸದ ರಾಶಿ ಹೆಚ್ಚಾಗಿದ್ದು, ನಗರವಾಸಿಗಳ ನಿದ್ದೆಗೆಡಿಸಿದೆ.
ಕಸದ ರಾಶಿಯನ್ನು ಶೇಖರಣೆ ಮಾಡಲು ಗ್ರಾ.ಪಂ ವತಿಯಿಂದ ವಾರಕ್ಕೆ ಒಂದು ಸಲ ಆಗಮಿಸುವ ಕಸ ವಿಲೇವಾರಿ ವಾಹನವು ಎರಡು ತಿಂಗಳಿಗಳಿಂದ ಪತ್ತೆ ಇಲ್ಲ. ಕಸದ ರಾಶಿ ಪಕ್ಕದ ರಸ್ತೆ ಹಾಗೂ ಚರಂಡಿಗಳಿಗೆ ವ್ಯಾಪಿಸಿದ್ದು, ವಾಹನಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಸ ವಿಲೇವಾರಿಗೆ ಗ್ರಾ.ಪಂ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ನೌಫಲ್ ಕಡಂಗ
