Advertisement
9:40 AM Sunday 3-December 2023

ವಿರಾಜಪೇಟೆಯಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ

16/02/2023

ವಿರಾಜಪೇಟೆ ಫೆ.16 : ಮೈಸೂರಿನ ನಾರಾಯಣ ಆಸ್ಪತ್ರೆ ಮತ್ತು ವಿರಾಜಪೇಟೆಯ ದಂತ ವೈದ್ಯಕೀಯ ಕಾಲೇಜು ಸಹ ಭಾಗಿತ್ವದಲ್ಲಿ ವಿರಾಜಪೇಟೆಯ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ನಡೆಯಿತು.
ನಗರದ ಮಾರಿಯಮ್ಮ ದೇವಾಲಯದಿಂದ ತೆಲುಗರಬೀದಿ, ದೊಡ್ಡಟ್ಟಿ ಚೌಕಿ, ಎಪ್.ಎಂ.ಸಿ ರಸ್ತೆ, ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಖಾಸಾಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣದ ರಸ್ತೆಯ ಮೂಲಕ ಸಾಗಿ ಸಂದೇಶ ನೀಡಿದರು.
ಜಾತಕ್ಕೆ ಡಾ. ಕಾರ್ಯಪ್ಪ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಡಾ.ಸುನೀಲ್ ಮುದ್ದಯ್ಯ ಹಸಿರು ನಿಶಾನೆ ತೋರಿದರು.
ಮೈಸೂರಿನ ನಾರಾಯಣ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ನವೀನ್ ಅಣ್ವೇಕರ್ ಮಾತನಾಡಿ, ಜನರು ಕ್ಯಾನ್ಸರ್ ಕಾಯಿಲೆಗೆ ಭಯಪಡುವ ಅವಶ್ಯಕತೆ ಇಲ್ಲ. ಈಗ ವಿಜ್ಞಾನ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ತಕ್ಷಣಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆ ಇದೆ ಮತ್ತು ಜನರು ದುಶ್ಚಟಗಳಿಂದ ದೂರವಾಗಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಾರಾಯಣ ಆಸ್ಪತ್ರೆಯ ವೈದ್ಯರಾದ ಡಾ.ನವೀನ್, ಡಾ.ವಿದ್ಯಾ, ಡಾ.ದೀಪಕ್, ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಪ್ರಜ್ವಲ್ ಮತ್ತು ಇತರೆ ವೈದ್ಯರು, ವಿರಾಜಪೇಟೆ ಡೆಂಟಲ್ ಕಾಲೇಜಿನ ವೈದ್ಯರಾದ ಡಾ.ಜತೀನ್, ಡಾ.ಗೌತಮ್, ಮತ್ತು ಡೆಂಟಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಜಾಥದಲ್ಲಿ ಪಾಲ್ಗೊಂಡಿದ್ದರು.
ಸುಮಾರು ಐವತ್ತು ವೈದ್ಯರು ಮತ್ತು ಇನ್ನೂರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.