ಶಿವರಾತ್ರಿಯ ಪ್ರಯುಕ್ತ ಸಿರಿಗನ್ನಡ ವೇದಿಕೆಯಿಂದ ಕವನ ಸ್ಪರ್ಧೆ : ವಿಜೇತರ ಪಟ್ಟಿ ಪ್ರಕಟ

ಮಡಿಕೇರಿ ಫೆ.17 : ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ಶಿವರಾತ್ರಿಯ ಪ್ರಯುಕ್ತ ಕೊಡಗಿನ ಕವಿಗಳಿಗೆ ನಡೆದ ಕವನ ಸ್ಪರ್ಧೆಯ ವಿಜೇತರ ಪಟ್ಟಿಪ್ರಕಟವಾಗಿದೆ.
ಸ್ಪರ್ಧೆಯಲ್ಲಿ ಮೂರ್ನಾಡು ಕೋಡಂಬೂರು ಗ್ರಾಮದ ಕೆ.ಜಿ.ರಮ್ಯಾ ಪ್ರಥಮ, ಸೋಮವಾರಪೇಟೆಯ ಎಲಿಜಬೆತ್ ಲೋಬೊ ದ್ವಿತೀಯ, ಮಡಿಕೇರಿಯ ಬಿ.ಜಿ.ಅನಂತ ಶಯನ ತೃತೀಯ ಸ್ಥಾನ ಪಡೆದುಕೊಂಡಿದ್ದು ನಾಲ್ಕನೇ ಸ್ಥಾನವನ್ನು ಮಡಿಕೇರಿಯ ಕೆ.ಶೋಭಾ ರಕ್ಷಿತ್, ಹುದಿಕೇರಿಯ ಚಕ್ಕೇರ ತ್ಯಾಗರಾಜ ಅಪ್ಪಯ್ಯ, ಬೋಯಿಕೇರಿ ಗ್ರಾಮದ ಪಿ.ಎಸ್. ವೈಲೇಶ್ ಪಡೆದುಕೊಂಡಿದ್ದಾರೆ.
ಸ್ಪರ್ಧೆಯ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಮುಂದೆ ತಾಲೂಕಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ( ದಿನಾಂಕ ಮತ್ತು ಸ್ಥಳ ನಂತರ ತಿಳಿಸಲಾಗುವುದು ) ಕವನ ವಚನ ಮಾಡಲು ಅವಕಾಶ ಕಲ್ಪಿಸಲಾಗುವುದು, ಹಾಗೂ ಕಳುಹಿಸಿದ ಎಲ್ಲಾ ಕವನವನ್ನು ಪುಸ್ತಕ ರೂಪದಲ್ಲಿ ಪ್ರಕಟವಾಗುವುದು, ಎಲ್ಲಾ ಭಾಗವಹಿಸಿದ ಸ್ಪರ್ಧಿಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
