Advertisement
11:37 AM Monday 4-December 2023

ಜಿಲ್ಲಾ ಮಟ್ಟದ ಕ್ರೀಡಾ ತರಬೇತಿ ಶಿಬಿರ : ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ವಿ.ಟಿ.ವಿಸ್ಮಯ ಕರೆ

17/02/2023

ನಾಪೋಕ್ಲು ನ.17 : ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯ ಹೇಳಿದರು.

ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಲಕ ಬಾಲಕಿಯರಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಎರಡು ದಿನಗಳ ವಿವಿಧ ಕ್ರೀಡಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದಿಂದ ದೊರಕುವ ಮಾಹಿತಿಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಥ್ಲೆಟಿಕ್ಸ್ ಹಿರಿಯ ತರಬೇತುದಾರ ಅಂತೋನಿ ಡಿಸೋಜಾ ಮಾತನಾಡಿ, ಕ್ರೀಡಾ ಶಿಬಿರದ ಉದ್ದೇಶ ಕ್ರೀಡೆಯ ಮಹತ್ವ ಹಾಗೂ ಸಾಧಕ ಕ್ರೀಡಾಪಟುಗಳ ಬಗ್ಗೆ ಮಾಹಿತಿ ನೀಡಿದರು.
ಹಾಕಿ ತರಬೇತುದಾರರಾದ ಕೆ.ಕೆ.ಬಿಂದಿಯಾ, ಅಥ್ಲೆಟಿಕ್ಸ್ ತರಬೇತುದಾರ ಮಹಾಬಲ, ಸಿಬ್ಬಂದಿ ವರ್ಗ ಮೇಲ್ವಿಚಾರಕರು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ 75 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ವರದಿ : ದುಗ್ಗಳ ಸದಾನಂದ