Advertisement
1:30 AM Thursday 7-December 2023

ಸುಂಟಿಕೊಪ್ಪ : ಗ್ರಾ.ಪಂ ನೂತನ ಕಚೇರಿಯಲ್ಲಿ ಗಣಪತಿ ಹೋಮ

17/02/2023

ಸುಂಟಿಕೊಪ್ಪ, ಫೆ.17: ಸುಂಟಿಕೊಪ್ಪ ಗ್ರಾ.ಪಂ ನೂತನ ಕಚೇರಿಯಲ್ಲಿ ಗಣಪತಿ ಹೋಮ ನಡೆಯಿತು.

ಗ್ರಾ.ಪಂ ಅಧ್ಯಕ್ಷೆ  ಶಿವಮ್ಮ  ಮಾತನಾಡಿ,  ನೂತನ ಕಟ್ಟಡಕ್ಕೆ 4 ವರ್ಷದ ಹಿಂದೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ  ನೆರವೇರಿಸಿದರು.   ಗ್ರಾ.ಪಂ ರೂ.37 ಲಕ್ಷ  ಹಾಗೂ ಜಿ.ಪಂ.ನಿಂದ 10 ಲಕ್ಷ ರೂ ವೆಚ್ಚದಲ್ಲಿ  ಸುಸಜ್ಜಿತ  ಕಟ್ಟಡವನ್ನು ಮಾರುಕಟ್ಟೆ ಸಮೀಪದಲ್ಲಿ ನಿರ್ಮಾಣವಾಗಿದೆ.  ಸದ್ಯದಲ್ಲೇ ಈ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಲಾಗುವುದೆಂದು ಅಧ್ಯಕ್ಷೆ ಶಿವಮ್ಮ ತಿಳಿಸಿದರು. 

ನಂತರ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಹೊಸ ಗ್ರಾ.ಪಂ  ಕಟ್ಟಡದಿಂದ ಭಾವೈಕ್ಯತೆ ಮೂಡಿ ಸರ್ವರಿಗೂ ಒಳಿತಾಗಲಿ ಎಂದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಹೆಚ್.ವೇಣುಗೋಪಾಲ ಮಾತನಾಡಿ, ನೂತನ ಕಟ್ಟಡದಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯಲಿ, ಸಿಬ್ಬಂದಿಗಳಿಗೆ ಒಳಿತಾಗಲಿ ಪಂಚಾಯಿತಿ ಮತ್ತಷ್ಟು ಅಭಿವೃದ್ಧಿಯಾಗಲೆಂದು  ಹಾರೈಸಿದರು.

ಗ್ರಾ.ಪಂ ನೂತನ ಕಚೇರಿಯ ಪೀಠೋಪಕರಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶಾಸಕರ ನಿಧಿಯಿಂದ ರೂ.5 ಲಕ್ಷ ಬಿಡುಗಡೆಗೊಳಿಸುವುದಾಗಿ  ಪಿಡಿಓ ಹೇಳಿದರು.

ಈ ಸಂದರ್ಭ   ಗ್ರಾ.ಪಂ ಅಧ್ಯಕ್ಷೆ ಶಿವಮ್ಮ , ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಿಡಿಓ ವೇಣುಗೋಪಾಲ್ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ರಫೀಕ್ ಖಾನ್, ಮಂಜುನಾಥ್, ಜೀನಾಸುದ್ಧೀನ್, ಪಿ.ಎಫ್.ಸಬಾಸ್ಟಿನ್,  ಲೆಕ್ಕಾಧಿಕಾರಿ ಚಂದ್ರಕಲಾ, ಪಂಚಾಯಿತಿ ಸಿಬ್ಬಂದಿಗಳಾದ ಸಂಧ್ಯಾ, ಶ್ರೀನಿವಾಸ್, ಡಿ.ಎಂ.ಮಂಜುನಾಥ್ ಹಾಗೂ ಪೌರಕಾರ್ಮಿಕರು ಇದ್ದರು.