ಗದ್ದೆಹಳ್ಳ ಸರಕಾರಿ ಶಾಲೆಯ ವಾರ್ಷಿಕೋತ್ಸವ : ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
17/02/2023

ಸುಂಟಿಕೊಪ್ಪ,ಫೆ.17: ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ನೃತ್ಯ ಸಂಗೀತ, ಹಾಡು ಸಾಮೂಹಿಕ ನೃತ್ಯಗಳು ನೆರೆದಿದ್ದವರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಭಿನ್ನ ಬಗೆಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.
ಸಮಾರಂಭಕ್ಕೆ ಗದ್ದೆಹಳ್ಳದ ಅಮಿಟಿ ಯೂತ್ ಕ್ಲಬ್ ಆರ್ಥಿಕ ನೆರವು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
