Advertisement
9:31 AM Sunday 3-December 2023

ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ

17/02/2023

ಮಡಿಕೇರಿ ಫೆ.17 :  ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಪ್ರಯುಕ್ತ ಮಡಿಕೇರಿಯ ಪನಾಸಿಯ ಪಾಲಿ ಕ್ಲಿನಿಕ್‌ನಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆರೋಗ್ಯ ಸಮಿತಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪನಾಸಿಯ ಪಾಲಿ ಕ್ಲಿನಿಕ್, ಹಿರಿಯರಿಂಗ್, ಸ್ಪೀಚ್ ಅಂಡ್ ಇಂಪ್ಲಾಂಟ್ ಕ್ಲಿನಿಕ್ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಕಿವಿ, ಮೂಗು, ಗಂಟಲು, ದಂತ ಹಾಗೂ ಅಸ್ತಮಾ ಕಾಯಿಲೆ ಪರೀಕ್ಷೆಯೊಂದಿಗೆ ಸಾಮಾನ್ಯ ರೋಗಗಳ ತಪಾಸಣೆಯಲ್ಲಿ 60 ಜನ ಪಾಲ್ಗೊಂಡಿದ್ದರು.

ಅಗತ್ಯ ಇರುವವರಿಗೆ ಸಿಪ್ಲಾ ಸಂಸ್ಥೆಯಿಂದ ಉಚಿತವಾಗಿ ಔಷಧಿ ನೀಡಲಾಯಿತು.  ಡಾ.ತಿರುಮಲರಾವ್, ಡಾ.ದಿವ್ಯಾ ಜ್ಯೋತಿ, ವಿಷಯ ಪರಿಣಿತ ಜೀತೇಂದ್ರಕುಮಾರ್ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.  ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ, ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಬೆಳ್ಳಿ ಮಹೋತ್ಸವ ಆರೋಗ್ಯ ಸಮಿತಿ ಸಂಚಾಲಕ ಅಬ್ದುಲ್ಲಾ, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ವಿಶ್ವ ಕುಂಬೂರು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ  ಜೇರುಸ್ ಥೋಮಸ್ ಅಲೆಗ್ಸಾಂಡರ್, ರಿಜ್ವಾನ್ ಹುಸೇನ್, ನವೀನ್ ಸುವರ್ಣ ಮತ್ತಿತರರು ಇದ್ದರು.