ಮೂರ್ನಾಡು : ಫೆ.25 ಮತ್ತು 26 ರಂದು ‘ಸ್ವಜಾತಿ ಬಂಧುಲೆನ ಸಮ್ಮಿಲನ-2023’ ಕಾರ್ಯಕ್ರಮ

ಮಡಿಕೇರಿ ಫೆ.17 : ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಫೆ.25 ಮತ್ತು 26 ರಂದು ‘ಸ್ವಜಾತಿ ಬಂಧುಲೆನ ಸಮ್ಮಿಲನ-2023’ ಕಾರ್ಯಕ್ರಮ ನಡೆಯಲಿದೆ.
ಫೆ.25 ರಂದು ಮೂರ್ನಾಡು ಕಾಲೇಜು ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ.ಚಂದ್ರಶೇಖರ ರೈ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಬಿ.ಕೆ.ರವೀಂದ್ರರೈ, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ರಮೇಶ್‍ರೈ, ಜಿಲ್ಲಾ ಖಜಾಂಚಿ ಬಿ.ಎನ್.ರತ್ನಾಕರ ರೈ, ಸಹ ಕಾರ್ಯದರ್ಶಿ ಬಿ.ಸಿ. ಹರೀಶ್‍ರೈ, ಬಿ.ಜೆ. ಮನೋಜ್ ಶೆಟ್ಟಿ, ಮಡಿಕೇರಿ ತಾಲೂಕು ಸಂಘದ ಕಾರ್ಯದರ್ಶಿ ವಿಠಲ ರೈ, ಖಜಾಂಚಿ ದಿವೇಶ್‍ರೈ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್ ರೈ, ಖಜಾಂಚಿ ಜಗನ್ನಾಥ್ ರೈ, ಜಿಲ್ಲಾ ಸಂಘದ ನಿರ್ದೇಶಕ ಬಿ.ಕೆ.ಬಾಲಕೃಷ್ಣ(ಅಪ್ಪು) ರೈ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಚ್.ರುಕ್ಮಿಣಿ ರೈ, ಉದ್ಯಮಿ ಅಶೋಕ್ ಶೆಟ್ಟಿ, ಬೆಳೆಗಾರ ಲೀಲಾಧರ ರೈ ನೀಲುಮಾಡು ಪಾಲ್ಗೊಳ್ಳಲಿದ್ದಾರೆಂದು ಮೂರ್ನಾಡು ಹೋಬಳಿ ಬಂಟರ ಸಂಘದ ಕಾರ್ಯದರ್ಶಿ ಬಿ.ಬಿ. ಅಶ್ವತ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26 ರಂದು ಸಂಜೆ 5 ಗಂಟೆಗೆ ಬಿ.ಕೆ.ಚಂದ್ರಶೇಖರ ರೈಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ.ಜಗದೀಶ್‍ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಬಿ.ಬಿ. ಐತಪ್ಪರೈ, ರವೀಂದ್ರ ವಿ. ರೈ, ರವೀಂದ್ರ ರೈ ಬಿ.ಕೆ., ಅಶ್ವಿನಿ ಪುರುಷೋತ್ತಮ ರೈ, ನಾಗೇಂದ್ರ ರೈ, ರಮೇಶ್ ರೈ, ಜನಾರ್ದನ ಶೆಟ್ಟಿ, ದುಷ್ಯಂತ್ ರೈ, ರತ್ನಾಕರ ರೈ, ವಸಂತ ರೈ, ಬಿ.ಸಿ.ಹರೀಶ್ ರೈ, ಗಿರೀಶ್ ರೈ, ಸೌಮ್ಯ ಶೆಟ್ಟಿ, ಶರತ್ ಶೆಟ್ಟಿ, ಜಯಂತಿ ರೈ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ವಿವಿಧ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ
ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ವಿವಿಧ ವಿಭಾಗದಲ್ಲಿ ಓಟ, ಕಾಲಿನ ನಡುವೆ ಬಲೂನ್ ಇಟ್ಟುಕೊಂಡು ಓಡುವ ಸ್ಪರ್ಧೆ ಸೇರಿದಂತೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ.
ಸಮಾರೋಪ ಸಮಾರಂಭದ ಬಳಿಕ ಮಸ್ಕಿರಿ ಕುಡ್ಲ ತಂಡದ ಕಾಮಿಡಿ ಕಚಗುಳಿ ಇರಲಿದೆ. ಖ್ಯಾತ ಕಲಾವಿದರಾದ ದೀಪಕ್ ರೈ ಪಾಣಾಜೆ, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ ಅಭಿನಯದ ನಾಟಕ ವಿಶೇಷ ಆಕರ್ಷಣೆಯಾಗಿರಲಿದೆ. ಜತೆಗೆ ಸಮಾಜದಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಸನ್ಮಾನ : ವಿವಿಧಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಮಾಜದ ಸಾಧಕರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಹೇಮಂತ್ ಶೆಟ್ಟಿ, ಬಾಬ ಅರುಣ್‍ರೈ, ಬಿ.ಕೆ. ಸುರೇಶ್‍ರೈ, ಸುಮತಿ ಶೆಟ್ಟಿ, ಜಿತೇಂದ್ರ ರೈ, ಜಯಂತಿ ಲವ ರೈ, ಕಿಶೋರ್‍ರೈ ಕತ್ತಲೆಕಾಡು, ಪ್ರೇಮಲತಾ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.
