ಕೊಡಗು : ಫೆ.20 ರಂದು ವಿದ್ಯುತ್ ಅದಾಲತ್
17/02/2023

ಮಡಿಕೇರಿ ಫೆ.17 : ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಮಡಿಕೇರಿ ಉಪ ವಿಭಾಗ ಪೆರಾಜೆ ಗ್ರಾ.ಪಂ.ಸಭಾಂಗಣ, ತಾಳತ್ತ್‌ಮನೆ, ಮೇಕೇರಿ, ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ, ಗೋಣಿಕೊಪ್ಪಲು ಉಪ ವಿಭಾಗದ ಹಾತ್ತೂರು ಗ್ರಾ.ಪಂ.ಸಭಾಂಗಣ, ವಿರಾಜಪೇಟೆ ಉಪ ವಿಭಾಗದ ಬಿಳುಗುಂದ ಸರ್ಕಾರಿ ಪ್ರೌಢ ಶಾಲಾ ಸಭಾಂಗಣ, ಕುಶಾಲನಗರ ಉಪ ವಿಭಾಗದ ಸಿದ್ದಲಿಂಗಪುರದ ಅರಶಿನಗುಪ್ಪೆ ಮಂಜುನಾಥ ದೇವಸ್ಥಾನ ಸಭಾಂಗಣ ಹಾಗೂ ಸೋಮವಾರಪೇಟೆ ಉಪ ವಿಭಾಗದ ಕಾಟಿಕೊಪ್ಪಲು ಗ್ರಾಮದ ಯಲಕನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಫೆಬ್ರವರಿ, 20 ರಂದು ಬೆಳಗ್ಗೆ 11 ಗಂಟೆಯಿಂದ ವಿದ್ಯುತ್ ಅದಾಲತ್ ನಡೆಯಲಿದೆ.
ಆದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
