Advertisement
3:14 AM Friday 8-December 2023

ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆ

17/02/2023

ಮಡಿಕೇರಿ ಫೆ.17 : ಮೈಸೂರಿನ ಯುವರಾಜ ಇಂಡೋರ್ ಹಾಲ್ ನಲ್ಲಿ ಫೆ.11 ರಂದು ನಡೆದ ವಿ ಎಸ್ ಕೆ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ 8 ವಿದ್ಯಾರ್ಥಿಗಳು ಪ್ರಥಮ, 9 ವಿದ್ಯಾರ್ಥಿಗಳು ದ್ವಿತೀಯ ಹಾಗೂ ಮೂವರು ತೃತೀಯ ಸ್ಥಾನ ಗಳಿಸಿದ್ದಾರೆ. ಮಾದಾಪುರ ಸಮೀಪದ ಹಟ್ಟಿಹೂಳೆ ನಿರ್ಮಲ ವಿದ್ಯಾ ಭವನ ಶಾಲೆಯ ವಿದ್ಯಾರ್ಥಿಗಳು 11 ವರ್ಷದ ಬಾಲಕರ ವಿಭಾಗದಲ್ಲಿ ಸಜಿನ್ ಎ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. 12 ವರ್ಷದ ಬಾಲಕರ ವಿಭಾಗದಲ್ಲಿ ಡೀನ್ ಅಪ್ಪಣ್ಣ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ 12ವರ್ಷದ ವಿಭಾಗದಲ್ಲಿ ಕವನ ಎಂ ಎಸ್  ಕಟಾ ಪ್ರಥಮ ಹಾಗೂ ಕುಮಿತೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. 13ವರ್ಷ ವಿಭಾಗದಲ್ಲಿ ಮರಿಯಾ ಜೋಶ್ನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ,13 ವರ್ಷದ ವಿಭಾಗದಲ್ಲಿ ಮೌನ ಜಿ ಸಿ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಕುಮಿತೆ ವಿಭಾಗದಲ್ಲಿ  13 ವರ್ಷದ ಕಟಾ ವಿಭಾಗದಲ್ಲಿ ಲಿಖಿತ ತೃತೀಯ ಸ್ಥಾನ ಪಡೆದಿರುತ್ತಾರೆ. ಸುಂಟಿಕೊಪ್ಪದ ಸಂತ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಬಾಲಕಿಯರ ವಿಭಾಗದಲ್ಲಿ 11 ವರ್ಷದ ಕಟಾ ವಿಭಾಗದಲ್ಲಿ ವರ್ಷ ವಿ ಆರ್ ಪ್ರಥಮ ಸ್ಥಾನ ಗಳಿಸಿರುತ್ತಾರೆ ಜೀವಿಕ ಆರ್ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ 12 ವರ್ಷ ಬಾಲಕರ ವಿಭಾಗದಲ್ಲಿ ದಿಗಂತ್ ಎಂ ಎಸ್ ಪ್ರಥಮ ಸ್ಥಾನ ಪಡೆದಿರುತ್ತಾರೆ ಹತ್ತು ವರ್ಷ ಬಾಲಕರ ವಿಭಾಗದಲ್ಲಿ ಮನೀಶ್ ಡಿ ಎ ಪ್ರಥಮ ಸ್ಥಾನದಲ್ಲಿ ಇರುತ್ತಾರೆ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬಾಲಕಿಯರ ವಿಭಾಗದಲ್ಲಿ ಕಾವೇರಿ ಮನೋಜ್ 10 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, 11 ವರ್ಷದ ಬಾಲಕರ ವಿಭಾಗದಲ್ಲಿ ಶೋಭಿತ್ ಕೆ ಎಲ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಪ್ರಧಾನ್ ಪೊನ್ನಣ್ಣ ಎಸ್ ಡಿ 12 ವರ್ಷದ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದ ಬ್ಲ್ಯಾಕ್ ಬೆಲ್ಟ್ ವಿಭಾಗದ ಕಿರಿಯರ ವಿಭಾಗದಲ್ಲಿ ಸುಂಟಿಕೊಪ್ಪದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಕ್ಷಯ್ ಕೆ ಎಸ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಇವರು ಸೆನ್ಸಾಯಿ ಬಿ.ಎಂ.ಮುಖೇಶ್ ಅವರಲ್ಲಿ ತರಬೇತಿ ಪಡೆದಿದ್ದಾರೆ.