Advertisement
12:23 PM Monday 4-December 2023

ಕೊಂಡಂಗೇರಿ ದರ್ಗಾ ಶರೀಫ್ ಉರೂಸ್ ಗೆ ಚಾಲನೆ

18/02/2023

ನಾಪೋಕ್ಲು ಫೆ.7 : ಕೊಂಡಂಗೇರಿ ದರ್ಗಾ ಶರೀಫ್ ಉರೂಸ್ ಗೆ ಚಾಲನೆ ನೀಡಲಾಯಿತು.
ಸೈಯದ್ ಹಸನ್ ಅಟಕೋಯ ಹಾಗೂ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರೂಸ್ ಗೆ ಚಾಲನೆ ದೊರೆಯಿತು.
ನಂತರ ಮಾತನಾಡಿದ ಸೈಯದ್ ಹಸನ್ ಅಟಕೋಯ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಕುಟುಂಬ ಪರಂಪರೆಯ ಸಂತತಿ ಒಬ್ಬರು ಇಲ್ಲಿ ಸಮಾಧಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಮಹಾತ್ಮರು ಬೋಧಿಸಿದ ಮಾನವೀಯ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಮಾಯತ್ ಅಧ್ಯಕ್ಷ ಪಿ.ಈ.ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಸಹಾಯಕ ಖಾಜಿ ಕೆ.ಎಸ್.ಶಾದುಲಿ ಫೈಸಿ, ತಕ್ಕ ಮುಖ್ಯಸ್ಥರಾದ ಆರ್.ಕೆ.ಅಹಮದ್ ಮುಸ್ಲಿ, ಎ.ಹೆಚ್. ಇಕ್ಬಾಲ್, ಇಬ್ರಾಹಿಂ, ಉಪಾಧ್ಯಕ್ಷ ಪಿ.ಎಚ್.ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಕೆ.ವೈ.ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಎ.ಯ0.ಅಬ್ದುಲ್ಲಾ, ಮುದರೀಸ್ ಜುನೈದ್ ಸಖಾಫಿ, ಖತೀಬರಾದ ಯಾಸಿರ್ ಸಖಾಫಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ವರದಿ : ದುಗ್ಗಳ ಸದಾನಂದ