Advertisement
3:39 AM Friday 8-December 2023

ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದಿಂದ ವಿಜಯ ಸಂಕಲ್ಪ ಅಭಿಯಾನ

19/02/2023

ಸುಂಟಿಕೊಪ್ಪ ಫೆ.19 : ಸುಂಟಿಕೊಪ್ಪ ಬಿಜೆಪಿಯ 2 ಶಕ್ತಿ ಕೇಂದ್ರದ ವತಿಯಿಂದ ವಿಜಯ ಸಂಕಲ್ಪ
ಅಭಿಯಾನವನ್ನು ಕನ್ನಡ ವೃತ್ತದಲ್ಲಿ ಭಾನುವಾರ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಧ್ವಜ ಹಿಡಿದು ರಾಷ್ಟ್ರ
ಹಾಗೂ ರಾಜ್ಯ ನಾಯಕರುಗಳಿಗೆ ಜೈಕಾರ ಹಾಕಿದರು.
ಅಂಗಡಿ, ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ತೆರಳಿ ಸರಕಾರದ ಅಭಿವೃದ್ದಿ ಯೋಜನೆಗಳ ಕರಪತ್ರಗಳನ್ನು ವಿತರಿಸಿದರು. ಮತ್ತೋಮ್ಮೆ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಅಧಿಕಾರಕ್ಕೇರಿಸುವಂತೆ
ಮನವಿ ಮಾಡಿದರು.
ಈ ಸಂದರ್ಭ ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್,
ವಸಂತಿ, ಗೀತಾ, ಬಿಜೆಪಿ ಯುವಮೋರ್ಚಾ ಅದ್ಯಕ್ಷ ವಿಘ್ನೇಶ್ ಹಾಗೂ ಕಾರ್ಯಕರ್ತರು
ಇದ್ದರು.