ಗುಡುಗಳಲೆ ಯುವಕ ಶಿವಮೊಗ್ಗದಲ್ಲಿ ಸಾವು
19/02/2023

ಮಡಿಕೇರಿ ಫೆ.19 : ಶಿವಮೊಗ್ಗದಲ್ಲಿ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗುಡುಗಳಲೆಯ ನಿವಾಸಿ ಜಗತ್ (22) ನಿನ್ನೆ ನಿಧನ ಹೊಂದಿದ್ದಾರೆ. ಬಿಡುವಿನ ವೇಳೆ ಶಿವಮೊಗ್ಗದಲ್ಲಿ ಸ್ನೇಹಿತರ ಜೂತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಇವರು ಹಂಡ್ಲಿ ಸರ್ಕಾರಿ ಪ್ರೌಡ ಶಾಲೆಯ ಶಿಕ್ಷಕಿ ನಳಿನಿ ಹಾಗೂ ನಿವೃತ್ತ ಶಿಕ್ಷಕ ರವಿ ಅವರ ಪುತ್ರರಾಗಿದ್ದಾರೆ. ಮೃತ ಜಗತ್ ಗೆ ಓರ್ವ ಸಹೊದರ ಇದ್ದಾನೆ.













