Advertisement
2:37 AM Saturday 2-December 2023

ಚೆಟ್ಟಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮಹಾಶಿವರಾತ್ರಿ

20/02/2023

ಚೆಟ್ಟಳ್ಳಿ ಫೆ.20 :  ಮಹಾಶಿವರಾತ್ರಿ ಅಂಗವಾಗಿ ಚೆಟ್ಟಳ್ಳಿಯ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿ, ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಚೇರಿ ಮುಂದಿರುವ ಪಶುಪತಿನಾಥ, ಕಾವೇರಿ ಮಾತೆ, ಶ್ರೀ ಕೃಷ್ಣ, ಗೋಮಾತೆ  ಹಾಗೂ  ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿರುವ ಶ್ರೀ ವಿನಾಯಕ, ವೀರಾಂಜನೇಯ ಹಾಗೂ ಮಹಾವಿಷ್ಣುವಿನ ಮೂರ್ತಿಗೆ  ವಿಶೇಷ ಪೂಜೆ ಸಲ್ಲಿಸಲಾಯಿತು.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  , ಜನಪರಹೋರಾಟ ಸಮಿತಿ, ಶ್ರೀ ವೀರಾಂಜನೇಯ ಯುವಕ ಸಂಘ, ಚೆಟ್ಟಳ್ಳಿ ಶ್ರೀ ಗೌರಿ ಗಣೆಶೋತ್ಸವ ಸಮಿತಿ  , ಶ್ರೀ ವಿನಾಯಕ ದೇವಾಲಯ ಸಮಿತಿ  ಸಂಯುಕ್ತ ಆಶ್ರಯದಲ್ಲಿ ಮೂರನೇ ವರ್ಷದ ಶಿವರಾತ್ರಿ ಪೂಜಾ ಕಾರ್ಯಕ್ರಮ ಜರುಗಿತು.

ಅಲಂಕಾರದೊಂದಿಗೆ ದೀಪಾರಾಧನೆ ಹಾಗೂ ವಿಶೇಷಪೂಜೆ ಸಲ್ಲಿಸಲಾಯಿತು. ನಂತರ   ಮಹಾ ಮಂಗಳಾರತಿ ಪ್ರಸಾದ ವಿತರಣೆ ನೆರವೇರಿತು. 

ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪಮಾತನಾಡಿ,  ಶಿವರಾತ್ರಿಯ ಹಿನ್ನೆಲೆ ತಿಳಿಸಿ ಎಲ್ಲರಿಗೂ ಶುಭಕೋರಿದರು.

ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಶ್ರೀ ಮೋದಿ ಭವನದಲ್ಲಿ ನಡೆದ  ಸಭಾ ಕಾರ್ಯದಲ್ಲಿ ಕೃಷಿ  ಇಲಾಖೆಯ
ನಿವೃತ್ತ ಉಪ ನಿರ್ದೇಶಕ ರಾಜಶೇಖರ್ , ಸಹಕಾರ ಸಂಘಗಳ ನಿವೃತ್ತ  ಹಿರಿಯಲೆಕ್ಕ ಪರಿಶೋಧಕ ಡಿ.ಎನ್ .ಚಂದ್ರಶೇಖರ್,  ಪೇರಿಯನ ಜಯಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾತ್ರಿ  ಗೋಣಿಕೊಪ್ಪಲಿನ ಯುವ ಗಾಯಕ ಸಿ.ಪಿ.ಅನ್ವಿತ್ ಕುಮಾರ್  ಹಾಗೂ ಉಡುಪಿಯ ದೀಪಿಕಾ  ಅವರಿಂದ ಗಾಯನ ಹಾಗೂ ಸುರಕ್ಷ ವೈಲಾಯರ ವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.  ನಂತರ ಪ್ರಸಾದ, ಅನ್ನ ಸಂತರ್ಪಣೆ ನಡೆಯಿತು.
ವೀರಾಂಜನೆಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ, ಜನಪರ ಹೋರಾಟ ಸಮಿತಿ ಅಧ್ಯಕ್ಷ ನೂಜಿಬೈಲು ನಾಣಯ್ಯ , ಶ್ರೀವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಚೆಟ್ಟಳ್ಳಿಯ ಅಧ್ಯಕ್ಷ  ಎನ್.ಎಸ್.ರವಿ, ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ನಂದಿನಿ , ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ.ರಮೇಶ್ ಸಂಘದ ನಿರ್ದೇಶಕರುಗಳು, ಸದಸ್ಯರು, ಗ್ರಾಮಸ್ಥರು  ಪಾಲ್ಗೊಂಡಿದ್ದರು.

ಚೆಟ್ಟಳ್ಳಿಯಲ್ಲಿ ನಡೆದ ಶಿವರಾತ್ರಿ ಉತ್ಸದಂದು ಬಲ್ಲಾರಂಡ ಮಣಿ ಉತ್ತಪ್ಪ ಮಕ್ಕಳೊಂದಿಗೆ ಶಿವನಹಾಡಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಗಮನ  ಸೆಳೆದರು.