ವಿರಾಜಪೇಟೆ : ದಿವಂಗತ ಕೇಶವ ಭಟ್ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿನಿಧಿ
20/02/2023

ವಿರಾಜಪೇಟೆ ಫೆ.20 : ಕೊಡಗು ಸನಾತನ ಧರ್ಮ ಸಭಾ ವೇದಿಕೆ ವತಿಯಿಂದ ಸದ್ಗುರು ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಆಶ್ರಮದಲ್ಲಿ ದಿವಂಗತ ಕೋರಿಕ್ಕಾರು ಕೇಶವ ಭಟ್ಟ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಶಿಕ್ಷಕ ದಂಪತಿಗಳಾದ ಕೇಶವ ಭಟ್ಟ ಹಾಗೂ ಶಾರದಮ್ಮ ಅವರ ಹೆಸರಿನಲ್ಲಿ ಅವರ ಪುತ್ರಿಯರಾದ ವಾಣಿಶ್ರೀ, ಜ್ಯೋತಿ ಹಾಗೂ ಗೀತಾ ಇವರು ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿನಿಧಿಯನ್ನು ಸ್ಥಾಪಿಸಲು ರೂಪಾಯಿ ಐವತ್ತು ಸಾವಿರಗಳ ಡಿ.ಡಿ ಯನ್ನು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಅವರಿಗೆ ಹಸ್ತಾಂತರಿಸಿದರು.
ಕ.ಸಾ.ಪ. ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ, ಸದಸ್ಯರಾದ ಪುಷ್ಪಲತಾ ಶಿವಪ್ಪ ಹಾಗೂ ವಿಮಲಾ ದಶರಥ ಹಾಜರಿದ್ದರು.
