Advertisement
9:11 AM Sunday 3-December 2023

ಚೆಯ್ಯಂಡಾಣೆ : ಕರ್ನಾಟಕ ಬ್ಯಾಂಕ್ ನಲ್ಲಿ ಶತಮಾನೋತ್ಸವದ ಸಂಭ್ರಮ

20/02/2023

ಚೆಯ್ಯಂಡಾಣೆ ಫೆ.20 :  ಕರ್ನಾಟಕ ಬ್ಯಾಂಕ್ ಶಾಖೆಯು 99 ವರ್ಷ ಪೂರ್ಣ ಗೊಳಿಸಿ 100ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು. ಇದರ ಅಂಗವಾಗಿ ಬ್ಯಾಂಕ್ ನಲ್ಲಿ ಕಾರ್ಯಕ್ರಮ ಶತಮಾನೋತ್ಸವದ ಸಂಭ್ರಮ  ನಡೆಯಿತು.

ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಉಮೇಶ್,  ಕರ್ನಾಟಕ ಬ್ಯಾಂಕ್ ನ ಶತಮಾನೋತ್ಸವದ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು.
ಸ್ಥಳೀಯ ಗ್ರಾಹಕರಾದ ಎನ್.ಸಿ.ಗಣಪತಿ ಮಾತನಾಡಿ, ಕರ್ನಾಟಕ ಬ್ಯಾಂಕ್ ನ ಕಾರ್ಯವೈಖರಿಯ ಕುರಿತು ಶ್ಲಾಘಿಸಿದರು. ಶತಮಾನೋತ್ಸವ ಸಂಭ್ರಮಾಚರಣೆಗೆ ಶುಭ ಹಾರೈಸಿದರು.

ಈ ಸಂದರ್ಭ ಪ್ರಾರ್ಥನೆಯನ್ನು ಮೀನಾಕ್ಷಿ ನಡೆಸಿದರು. ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರರು  ಹಾಜರಿದ್ದರು.

ವರದಿ :  ಅಶ್ರಫ್