Advertisement
3:05 AM Friday 8-December 2023

ಪ್ರಬಾರ ಉಪಕುಲಪತಿಯಾಗಿ ವಿಜಯ್ ಪೂಣಚ್ಚ ನೇಮಕ

21/02/2023

ಮಡಿಕೇರಿ ಫೆ.21 : ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಕೊಡಗಿನವರಾದ ಡಾ.ತಂಬಂಡ ವಿಜಯ್ ಪೂಣಚ್ಚ ಅವರು ಇದೀಗ ವಿಶ್ವವಿದ್ಯಾನಿಲದ ಹಂಗಾಮಿ ಉಪಕುಲಪತಿಗಳಾಗಿ ಆಯ್ಕೆಗೊಂಡಿದ್ದಾರೆ.
ಈ ಬಗ್ಗೆ ಕುಲಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶದನ್ವಯ ವಿಶ್ವವಿದ್ಯಾನಿಲಯಗಳ ಸರಕಾರದ ಅಧೀನ ಕಾರ್ಯದರ್ಶಿ ಎನ್.ಶಿವಕುಮಾರ್ ಪ್ರಕರಣೆ ಹೊರಡಿಸಿದ್ದಾರೆ.