Advertisement
3:34 AM Saturday 2-December 2023

ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಂದ್ಯಾವಳಿ : ಕೊಡಗಿನ ಆಜ್ಞಾಳಿಗೆ ಚಿನ್ನದ ಪದಕ

21/02/2023

ಮಡಿಕೇರಿ ಫೆ.21 : ಕಿಕ್ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.13 ರಿಂದ 16 ರವರೆಗೆ ನಡೆದ  ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕೊಡಗಿನ ಎ.ಆಜ್ಞ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾಳೆ.
ಕೂಡುಮಂಗಳೂರಿನ ಅಮಿತ್ ವಿಶ್ವನಾಥ್ ಹಾಗೂ ಎಂ.ವಿ.ದಿವ್ಯಾ ದಂಪತಿಯ ಪುತ್ರಿ ಆಜ್ಞ (7) ಅತ್ತೂರಿನ ಜ್ಞಾನಗಂಗಾ ಶಾಲೆಯ ವಿದ್ಯಾರ್ಥಿನಿ.
2021ರಲ್ಲಿ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಮತ್ತು 2022 ರಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಳು.
ಈಕೆ ಕೂರ್ಗ್ ಕಾಂಬ್ಯಾಟ್ ಕ್ಲಬ್‍ನಲ್ಲಿ ತರಬೇತಿ ಪಡೆದಿದ್ದು, 6ನೇ ವಯಸ್ಸಿನಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾಳೆ. ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕವನ್ನು ಗೆಲ್ಲಬೇಕು ಮತ್ತು ಮಿಶ್ರ ಮಾರ್ಷಲ್ ಆಟ್ರ್ಸ್‍ನಲ್ಲಿ ವಿಶ್ವ ಚಾಂಪಿಯನ್ ಆಗಬೇಕು ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂಬ ಕನಸು ಹೊಂದಿದ್ದಾಳೆ.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕೊಡಗಿನ ಮೊದಲ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಆಜ್ಞ ಪಾತ್ರಳಾಗಿದ್ದಾಳೆ.
ದೆಹಲಿಯ ನಡೆದ ಸ್ಪರ್ಧೆಯಲ್ಲಿ ಕರ್ನಾಟಕದ ಲೀಲಾ ಹಾಗೂ ಆಜ್ಞ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ರೋಹನ್ ಬೆಳ್ಳಿ ಮತ್ತು ಫೈಜಾನ್ ಕಂಚು ಪಡೆದುಕೊಂಡಿದ್ದಾರೆ. ಈ ರೀತಿಯ ಪ್ರತಿಭೆಗಳನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಆಜ್ಞಳ ಪೋಷಕರು ಮನವಿ ಮಾಡಿದ್ದಾರೆ.