ಐಗೂರಿನಲ್ಲಿ ಛತ್ರಪತಿ ಶಿವಾಜಿ ಜನ್ಮದಿನಾಚರಣೆ
21/02/2023

ಸುಂಟಿಕೊಪ್ಪ ಫೆ.21 : ಬಜರಂಗದಳದ ವತಿಯಿಂದ ಐಗೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಬಜರಂಗದಳದ ಪ್ರಮುಖರು ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭ ಛತ್ರಪತಿ ಶಿವಾಜಿ ಅಭಿಮಾನಿ ಸಂಘದ ಅಧ್ಯಕ್ಷ ಯತೀಶ್ ರೈ, ಐಗೂರು ಬಜರಂಗದಳದ ಅಧ್ಯಕ್ಷ ಭರತ್ (ಸಜಿ), ಐಗೂರು ಗ್ರಾ.ಪಂ ಸದಸ್ಯ ಜಿ.ಕೆ.ವಿನೋದ್, ಐಗೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎ.ಪ್ರಭಾಕಾರ, ದಿನೇಶ್ ಶೆಟ್ಟಿ, ಅವಿಲಾಷ್, ಜಯಂತ್, ಬಿ.ದರ್ಶಿತ್,ವಿಪಿನ್ ರೈ, ಅನಂತ ಹಾಗೂ ಜಾರ್ಜ್ ಉಪಸ್ಥಿತಿದ್ದರು.
