Advertisement
12:54 AM Thursday 7-December 2023

ನೆಲ್ಯಹುದಿಕೇರಿ : ಮಾ.19 ರಿಂದ 21ರವರೆಗೆ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ

21/02/2023

ಮಡಿಕೇರಿ ಫೆ.21 : ನೆಲ್ಯಹುದಿಕೇರಿಯ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವು ಮಾ.19, 20 ಹಾಗೂ 21ರ ವರೆಗೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಮಾ.19 ರಂದು ಪ್ರಾತಕಾಲ 6.30 ರಿಂದ ಗಣಹೋಮ ಉತ್ಸವ ಪ್ರಾರಂಭವಾಗಲಿದೆ. ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡರಾ ಇಳಿಸುವುದು, 7 ಗಂಟೆಗೆ ಪ್ರಾರಂಭ ಶುದ್ಧ ಕಳಸ, ದೇವರ ಬಲಿ ನಡೆಯಲಿದೆ.
ಮಾ.20 ರಂದು ಬೆಳಿಗ್ಗೆ 10.30 ಗಂಟೆಗೆ ಸಾಮೂಹಿಕ ಆಶ್ಲೇಷಬಲಿ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪಟ್ಟಣಿ, ಶ್ರೀ ಪೊದಮ್ಮ ದೇವಾಲಯದಲ್ಲಿ ಸಂಜೆ 5 ಗಂಟೆಗೆ ಅಕ್ಕಿಹೇರುವುದು, ದೇವರ ಮೆರವಣಿಗೆ ಮತ್ತು ಮಹಾಪೂಜೆ ಜರುಗಲಿದ್ದು, ಮಂಗಳಾರತಿ ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ದೇವರ ಮೆರವಣಿಗೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಮಾ.21 ರಂದು ಬೆಳಿಗ್ಗೆ 9.30 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ 1.30 ಗಂಟೆಗೆ ಮಹಾಪೂಜೆ, 2 ಗಂಟೆಗೆ ಅನ್ನದಾನ ಜರುಗಲಿದೆ.
ಸಂಜೆ 3.30 ಗಂಟೆಗೆ ಹಿರಿಯರು ಹಾಗೂ ಮಕ್ಕಳು ತೆಂಗಿನಕಾಯಿ ಕೀಳುವ ಹಾಗೂ ಇಡುಗಾಯಿ ಹಿಡಿಯುವ ಸ್ಪರ್ಧೆ ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ದೇವರು ಜಳಕಕ್ಕೆ ಹೊರಡಲಿದ್ದು, 7.30 ಗಂಟೆಗೆ ದೇವರ ಪ್ರದಕ್ಷಿಣೆ, ರಾತ್ರಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಹಾಗೂ ದೇವಸ್ಥಾನದಿಂದ ಭಂಡಾರ ತಕ್ಕರ ಮನೆಗೆ ತಲುಪಿಸಲಾಗುವುದು.
ಮಾ.22 ರಂದು ಬೆಳಿಗ್ಗೆ 10.30 ಗಂಟೆಗೆ ಶುದ್ಧ ಕಳಸ, ಮಹಾಪೂಜೆ ಜರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮಂಗಳಾರತಿ ನಂತರ ಅನ್ನದಾನ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರಿ ಸತ್ಯನಾರಾಯಣ ದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.