Advertisement
4:06 AM Friday 8-December 2023

ಎಸ್.ವೈ.ಎಸ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಎಡಪಾಲ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ

21/02/2023

ಚೆಯ್ಯಂಡಾಣೆ ಫೆ.21 :  ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಎಡಪಾಲ ಶಾಖೆಯ ವಾರ್ಷಿಕ ಮಹಾ ಸಭೆ ನಡೆಯಿತು.

ಸಭೆಯಲ್ಲಿ ಎಸ್‍ವೈಎಸ್  ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಎಸ್‍ವೈಎಸ್ ಪದಾಧಿಕಾರಿಗಳು ::  ಅಧ್ಯಕ್ಷರಾಗಿ ಖಾದರ್ ಸಅದಿ, ಉಪಾಧ್ಯಕ್ಷರಾಗಿ ಎ.ಎಂ.ಮಹ್ಮೂದ್ , ಪಿ.ಎ.ಬಷೀರ್ , ಕಾರ್ಯದರ್ಶಿಯಾಗಿ ಎಂ.ಇ.ಹಂಝ , ಕೋಶಾಧಿಕಾರಿಯಾಗಿ ಕೆ.ಯು.ಸಿದ್ದೀಕ್ , ದಅವಾ ಕಾರ್ಯದರ್ಶಿಯಾಗಿ ಶರೀಫ್ ಝೈನಿ, ಜೊತೆ ಕಾರ್ಯದರ್ಶಿಯಾಗಿ ಆಸಿಫ್, ಕಾರ್ಯಕಾರಿಣಿ ಸದಸ್ಯರಾಗಿ ಮಜೀದ್, ಹಮೀದ್, ಲತೀಫ್, ಝುಬೈರ್, ನಾಸಿರ್, ಮಜೀದ್ ಪಿ.ಎ, ರಶೀದ್, ಅದ್ದು, ಶಂಸು ಅವರನ್ನು ಆಯ್ಕೆ ಮಾಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು :: ಅಧ್ಯಕ್ಷರಾಗಿ ಉಮ್ಮರ್ ಸಿ ಆರ್ ಪಿ, ಉಪಾಧ್ಯಕ್ಷರಾಗಿ ಕೆ.ಇ.ಅಬ್ದುಲ್ಲ , ಎ.ಎಂ.ಅಬ್ದುಲ್ಲ , ಕಾರ್ಯದರ್ಶಿಯಾಗಿ ಸಿ.ಎ.ಅಬೂಬಕ್ಕರ್ , ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಸಖಾಫಿ, ಕೋಡಿನೆಟರ್ ಆಗಿ ಖಾದರ್ ಮುಸ್ಲಿಯಾರ್,ಜೊತೆ ಕಾರ್ಯದರ್ಶಿಯಾಗಿ ಹುಸೈನಾರ್ ಪಿ.ಎಸ್, ಮುಹಮ್ಮದ್ ಕುಂಞಿ ಕಾರ್ಯಕಾರಿಣಿ ಸದಸ್ಯರಾಗಿ ಸಲಾಂ, ಕೆ.ಯು.ರಫೀಕ್ , ಕೆ.ಎಂ.ಮಜೀದ್ , ಶಂಸು ಮುಸ್ಲಿಯಾರ್, ಕೆ.ವೈ. ಹನೀಫಾ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಉಮ್ರಾ ಯಾತ್ರೆ ತೆರಳುತ್ತಿರುವ ಸಂಘಟನೆಯ ಮಾಜಿ ಕೋಶಾಧಿಕಾರಿ ಪಿ.ಎಸ್. ಹುಸೈನಾರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

ವರದಿ :  ಅಶ್ರಫ್