Advertisement
3:01 AM Friday 8-December 2023

ಸಹಾಯಧನಕ್ಕೆ ಅರ್ಜಿ ಆಹ್ವಾನ

22/02/2023

ಮಡಿಕೇರಿ ಫೆ.22 : 2022-23 ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮೈಸೂರು ರವರ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ 10+1 ಕುರಿ/ ಮೇಕೆ ಘಟಕ ಸಂಬಂಧ ಪ.ಜಾತಿ-1, ಸಾಮಾನ್ಯ ವರ್ಗದ 4 ಒಟು ್ಟ5 ಘಟಕಗಳನ್ನು (ಘಟಕ ವೆಚ್ಚ 70 ಸಾವಿರ ಸಹಾಯಧನ ಪರಿಶಿಷ್ಟ ಜಾತಿ/ ಸಾಮಾನ್ಯ ವರ್ಗ ಶೇ.50, ಸಹಾಯಧನ 35 ಸಾವಿರ ಫಲಾನುಭವಿಯ ವಂತಿಗೆ 35 ಸಾವಿರ) ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿಯ 18 ರಿಂದ 60 ವರ್ಷದ ಕೂಲಿ ಕಾರ್ಮಿಕರು, ಕೃಷಿ, ಕಾರ್ಮಿಕರು ಮತ್ತು ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಫಲಾನುಭವಿಗಳು ಆರ್‍ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಪಶು ಆಸ್ಪತ್ರೆ ಮಡಿಕೇರಿ 9448647276, ವಿರಾಜಪೇಟೆ 9141093996, ಪೊನ್ನಂಪೇಟೆ 9449081343, ಸೋಮವಾರಪೇಟೆ 9448655660, ಕುಶಾಲನಗರ 8951404025 ಇವರನ್ನು ಸಂಪರ್ಕಿಸಬಹುದು.
ಅರ್ಜಿಯನ್ನು ಭರ್ತಿ ಮಾಡಿ ಫೆಬ್ರವರಿ, 28 ರೊಳಗೆ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಪಶು ವೈದ್ಯ ಆಸ್ಪತ್ರೆಗೆ /ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ತಿಳಿಸಿದ್ದಾರೆ.