Advertisement
4:20 AM Friday 8-December 2023

ಮಾ.7 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲ್ಲಡ್ಚ(ವಾರ್ಷಿಕ) ಹಬ್ಬ

23/02/2023

ಮಡಿಕೇರಿ ಫೆ.23 : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲ್ಲಡ್ಚ(ವಾರ್ಷಿಕ) ಹಬ್ಬವು ಮಾರ್ಚ್, 07 ರಂದು ನಡೆಯಲಿದೆ.
ಮಾ.7 ರಂದು ಬೆಳಗ್ಗೆ 5.30 ಗಂಟೆಗೆ ಅಭಿಷೇಕ ಪೂಜೆ, ಬೆಳಗ್ಗೆ 6 ಗಂಟೆಗೆ ಪ್ರಾತಃಕಾಲದ ಪೂಜೆ, ಬೆಳಗ್ಗೆ 10 ಗಂಟೆಗೆ ಎತ್ತು ಪೋರಾಟ, ನಂತರ ತುಲಾಭಾರ ಸೇವೆ, ಭಕ್ತಾಧಿಗಳ ಸೇವಾ ಪೂಜೆ, ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಮಧ್ಯಾಹ್ನ 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಕ್ಕೆ ತೆರಳವುದು ಮತ್ತು ಸಂಜೆ 6 ಗಂಟೆಗೆ ದೇವರು ಮಲ್ಮದಿಂದ ಬಂದು ದೇವರ ಬಲಿ ನೃತ್ಯ ನಡೆಯಲಿದೆ ಎಂದು ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.