Advertisement
12:29 PM Monday 4-December 2023

ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಪಂದ್ಯ : ಟೀಂ ಎಚ್.ಡಿ.ಕೆ ಗೆ ಗೆಲುವು

23/02/2023

ಸೋಮವಾರಪೇಟೆ ಫೆ.23 : ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ 23ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಎಚ್.ಡಿ.ಕೆ. ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಟೀಂ ಆರ್.ಆರ್. ತಂಡವನ್ನು ಮಣಿಸಿ, ಪ್ರಶಸ್ತಿ ಮುಡಿಗೇರಿಸಿಕೊಮಡಿತು. ಆರ್.ಆರ್. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 22,222ನಗದು ಸೇರಿದಂತೆ ಟ್ರೋಫಿ, ದ್ವಿತೀಯ ಬಹುಮಾನ 11,111 ನಗದು ಸೇರಿದಂತೆ ಟ್ರೋಫಿ ವಿತರಿಸಲಾಯಿತು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶಾಸಕ ಅಪ್ಪಚ್ಚುರಂಜನ್, ಕಾಂಗ್ರೆಸ್ ಮುಖಂಡ ಹರಪಳ್ಳಿ ರವೀಂದ್ರ, ಗ್ರಾ.ಪಂ. ಸದಸ್ಯ ಡಿ.ಎಸ್. ಸುರೇಶ್, ಚೌಡ್ಲು ವಿಎಸ್‌ಎಸ್‌ಎನ್ ನಿರ್ದೇಶಕ ವೈ.ಎಂ. ನಾಗರಾಜು, ಪ್ರಮುಖರಾದ ಸಿ.ಡಿ. ಪ್ರವೀಣ್, ಡಿ.ಜಿ. ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವೈಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಿ.ಎಂ. ಸುರೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜೀ ಸೈನಿಕ ಸಿ.ಎಂ. ಪ್ರದೀಪ್ ಮತ್ತು ಯಡೂರು ಬಿಟಿಸಿಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ಎನ್. ರಾಜು ಅವರುಗಳನ್ನು ಸನ್ಮಾನಿಸಲಾಯಿತು.